ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 129 ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರು ಶಕ್ತಿ ಕೇಂದ್ರದ ಸವಣೂರು ಬೂತ್ ಸಂಖ್ಯೆ 65 ರಲ್ಲಿ ಬಿಜೆಪಿ ಬೂತ್ ಕಾರ್ಯದರ್ಶಿ ಸತೀಶ್ ಬಲ್ಯಾಯ, ರವರ ಮನೆಯಲ್ಲಿ ಆಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ದ ಕ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಶಕ್ತಿ ಕೇಂದ್ರ ಪ್ರಮುಖ್ ಚೇತನ್ ಕೋಡಿಬೈಲು, ಬೂತ್ ಅಧ್ಯಕ್ಷ ತೀರ್ಥರಾಮ ಕೆಡೆಂಜಿ, ಹಿಂದುಳಿದ ವರ್ಗಗಳ ಮೋರ್ಚಾದ ಸುಳ್ಯ ಮಂಡಲ ಸದಸ್ಯರು ಶ್ರೀಮತಿ ಚಂದ್ರಾವತಿ ಸುಣ್ಣಾಜೆ, ಬೂತ್ ಸದಸ್ಯರುಗಳಾದ ಶೇಷಪ್ಪ ನಾಯ್ಕ, ಗಂಗಾಧರ ಸುಣ್ಣಾಜೆ, ಹಿರಿಯರಾದ ಸಂಜೀವ ಬಲ್ಯಾಯ ಮತ್ತಿತರರು ಉಪಸ್ಥಿತರಿದ್ದರು























