ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ 23 ಸ್ಪರ್ಧಿಗಳನ್ನು ಹಿಂದಿಕ್ಕಿ ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿ ಕೈನ ಎತ್ತೋ ಮೂಲಕ ಸುದೀಪ್ ವಿನ್ನರ್ ಘೋಷಣೆ ಮಾಡಿದರು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ ಗಿಲ್ಲಿ ನಟ. ಅವರ ಅಭಿಮಾನಿಗಳ ಆಸೆ ಈಡೇರಿದೆ. ರಕ್ಷಿತಾಗೆ ರನ್ನರ್ ಅಪ್ ಸ್ಥಾನ ಸಿಕ್ಕಿದೆ.
ಈ ಮೊದಲು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಿಲ್ಲಿ ನಟ ಗಮನ ಸೆಳೆದರು. ಎಲ್ಲಾ ಶೋಗಲ್ಲಿ ಅವರು ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟುಕೊಳ್ಳಬೇಕಿತ್ತು.ಇದನ್ನು ಗಿಲ್ಲಿ ಕೂಡ ಹೇಳಿಕೊಂಡಿದ್ದರು. ಅವರಿಗೆ ಈ ವಿಷಯದಲ್ಲಿ ತುಂಬಾನೇ ಬೇಸರ ಇತ್ತು. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ.
ರಕ್ಷಿತಾರನ್ನು ಎಂಟರ್ಟೈನ್ಮೆಂಟ್ಗೆ ಬಳಸಿಕೊಂಡರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ನೌಕರಳಂತೆ ನಡೆಸಿಕೊಂಡರು, ತಮಾಷೆ ಮಾಡಲು ಬಳಸಿಕೊಂಡರು, ಫುಟೇಜ್ ತೆಗೆದುಕೊಳ್ಳಲು ಪುಕ್ಕಟೆ ಜಗಳ ಮಾಡಲು ಪಂಚಿಂಗ್ ಬ್ಯಾಗ್ನಂತೆ ನಡೆಸಿಕೊಂಡರು. ರಕ್ಷಿತಾರ ಬಣ್ಣದ ಬಗ್ಗೆ ಆಡಿಕೊಳ್ಳಲಾಯ್ತು, ಸ್ಲಂ ಎಂದು ಕರೆಯಲಾಯ್ತು, ‘ಸೆಡೆ’ ಎಂದು ಬೈಯ್ಯಲಾಯ್ತು, ರಕ್ಷಿತಾರ ಹಿನ್ನೆಲೆಯನ್ನು ಟೀಕಿಸಲಾಯ್ತು, ಆಕೆ ಧರಿಸುವ ಬಟ್ಟೆಗಳನ್ನು ಟೀಕಿಸಲಾಯ್ತು ಎಲ್ಲ ಅವಮಾನಗಳನ್ನು ಎದುರಿಸಿಯೂ ರಕ್ಷಿತಾ ಫಿನಾಲೆ ವರೆಗೆ ಬಂದರು. ಮಾತ್ರವಲ್ಲ, ಘಟಾನುಘಟಿಗಳನ್ನೇ ಹಿಂದಿಕ್ಕಿ ರನ್ನರ್ ಅಪ್ ಆಗಿದ್ದಾರೆ.
ಇಡೀ ಬಿಗ್ಬಾಸ್ ಮನೆಯಲ್ಲಿ ಕಿರಿಯ ವ್ಯಕ್ತಿ, ಅನುಭವವೂ ಕಡಿಮೆ ಆದರೆ ಹಲವು ಸಂದರ್ಭದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಘನತೆಯಿಂದ ವರ್ತಿಸಿದ್ದಾರೆ. ತಪ್ಪಿದ್ದಲ್ಲಿ ತಪ್ಪು ಎಂದಿದ್ದಾರೆ, ವಿರೋಧಿಗಳನ್ನೂ ಸಹ ಹೊಗಳಿದ್ದು ಸಹ ಇದೆ. ಯಾವ ನಾಟಕೀಯತೆಯೂ ಇಲ್ಲದೆ ಎಲ್ಲರೊಂದಿಗೆ ಬೆರೆತರು ಅವರ ಪ್ರಯಾಣ ನಿಜಕ್ಕೂ ಅಸಾಮಾನ್ಯಾಗಿತ್ತು. ಅವರು ರನ್ನರ್ ಅಪ್ ಆಗಿದ್ದರೂ ಸಹ ಅವರೇ ವಿನ್ನರ್, ‘ಗೊತ್ತಾಯ್ತಲ್ಲ’
ಗೆಜ್ಜೆ ಮ್ಯಾಟರ್‌ನಲ್ಲಿ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ದರ್ಪ ತೋರಿದ್ದರು. ಅಂತೂ ಆಕ್ಷೇಪಾರ್ಹ ಪದಗಳನ್ನ ಬಳಸಿದ್ದರು. ಇದರಿಂದ ರಕ್ಷಿತಾ ಶೆಟ್ಟಿಗೆ ಸಿಕ್ಕಾಪಟ್ಟೆ ಸಿಂಪಥಿ ಕ್ರಿಯೇಟ್ ಆಯ್ತು. ದೊಡ್ಡ ಫ್ಯಾನ್ ಬೇಸ್ ಸಹ ಸೃಷ್ಟಿಯಾಯ್ತು. ಆ ಫ್ಯಾನ್ ಬೇಸ್‌ನಿಂದಲೇ ಇದೀಗ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದಾರೆ ರಕ್ಷಿತಾ ಶೆಟ್ಟಿ.
”ಥ್ಯಾಂಕ್ಯು ಸೋ ಮಚ್ ಸಪೋರ್ಟ್ ಮಾಡಿದ್ದಕ್ಕೆ. ಇಲ್ಲಿಯತನಕ ನನ್ನನ್ನ ತಂದು ನಿಲ್ಲಿಸಿದ್ದೀರಾ.. ಅದಕ್ಕೆ ಖುಷಿ ಇದೆ” ಎಂದರು ರಕ್ಷಿತಾ ಶೆಟ್ಟಿ.
ರಕ್ಷಿತಾ ಶೆಟ್ಟಿ ತುಳು ನಾಡಿನ ಹೆಮ್ಮೆಯನ್ನ ಹೆಚ್ಚಿಸಿದ್ದಾರೆ. ಅರ್ಧಂಬರ್ಧ ಕನ್ನಡದ ಮೂಲಕ ಸವಾಲ್ ಹಾಕಿ ಇಡೀ ಮನೆಯನ್ನ ಖಾಲಿ ಮಾಡಿಸಿ, ಕೊನೆಗೂ ರನ್ನರ್ ಅಪ್ ಸ್ಥಾನವನ್ನ ಪಡೆದಿದ್ದಾರೆ. ವಿನ್ನರ್ ಗೂ ರನ್ನರ್ ಗೂ ಹೆಚ್ಚು ವೋಟಿನ ಅಂತರವಿಲ್ಲ ಎಂದು ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹೇಳಿದ್ದರು. ಅದರ ಲೆಕ್ಕದಲ್ಲಿ ಗಿಲ್ಲಿ ತಮ್ಮ ವಂಶದ ಕುಡಿಗಿಂತ ಕೊಂಚ ಮೇಲಿದ್ದಾರೆ ಎಂಬುದು ಅರ್ಥವಾಗುತ್ತೆ. ರಕ್ಷಿತಾ ವಯಸ್ಸು 25 ವರ್ಷ, ಅವರ ವಯಸ್ಸಿನಷ್ಟೇ ಹಣವನ್ನ ಸಂಪಾದಿಸಿದ್ದಾರೆ.
”ಕಿಚ್ಚನ ಚಪ್ಪಾಳೆ ಫೋಟೋಗಳನ್ನ ನಮಗೆ ಕೊಡಿ ಪ್ಲೀಸ್” ಎಂದು ಗಿಲ್ಲಿ, ರಕ್ಷಿತಾ ಹಾಗೂ ಅಶ್ವಿನಿ ಅವರು ಕೇಳಿಕೊಳ್ಳುತ್ತಾರೆ. ಅದಕ್ಕೆ ಕಿಚ್ಚ ಸಮ್ಮತಿಸುವುದರ ಜೊತೆಗೆ ಪ್ರತಿ ಫೋಟೋಗೂ ಆಟೋಗ್ರಾಫ್ ಹಾಕುತ್ತಾರೆ. ಇದು ಬಿಗ್ ಬಾಸ್ ಮನೆಯ ಸಖತ್ ಸ್ಪೆಷಲ್ ಕ್ಷಣವಾಗಿದೆ.


























