ಪುತ್ತೂರು: ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರು ವರ್ಷಂಪ್ರತಿ ನಡೆಸುವ. ಬಿರುಮಲೋತ್ಸವ ಕಾರ್ಯಕ್ರಮ ಫೆ.8 ರಂದು ಬೀರಮಲೆ ಬೆಟ್ಟದಲ್ಲಿ ಸಂಜೆ ನಡೆಯಲಿದೆ.
ಗಾಳಿಪಟ ಸ್ಪರ್ಧೆ , ಫುಡ್ ಕೋರ್ಟ್, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ(ವರ್ಣಕುಟೀರ ಪುತ್ತೂರು ಇವರಿಂದ) ನಡೆಯಲಿದ್ದು ಜನರಿಗೆ ಇದು ಉಚಿತ ಪ್ರವೇಶವಾಗಿರುತ್ತದೆ. ಸ್ಥಳದಲ್ಲಿ ಗಾಳಿಪಟ ತಯಾರಿಸಿ ಹಾರಿಸುವುದು ಮೊದಲೇ ತಯಾರಿಸಿದ ಅಥವಾ ರೆಡಿಮೇಡ್ ಗಾಳಿಪಟ ಹಾರಿಸುವುದು.
ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿರುವುದು. (ಪ್ರೈಮರಿ, ಹೈಸ್ಕೂಲ್, ಕಾಲೇಜು ಮತ್ತು ಓಪನ್ ) ಪ್ರತ್ಯೇಕ ಬಹುಮಾನ ನೀಡಲಾಗುವುದು. ಗಾಳಿಪಟ ತಯಾರಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ವಿಶೇಷ ಆಕರ್ಷಣೆಯಾಗಿ ಗಾಳಿಪಟ ಮಾರಾಟದ ಮಳಿಗೆ ಇರುತ್ತದೆ ಡ್ರಾಯಿಂಗ್ ಸ್ಪರ್ಧೆಯು ಪ್ರೈಮರಿ, ಹೈಸ್ಕೂಲ್ ವಿಭಾಗದಲ್ಲಿ ನಡೆಯುವುದು ಪ್ರೈಮರಿ ವಿಭಾಗ : ಪ್ರಾಣಿಗಳು ಪಕ್ಷಿಗಳ ಚಿತ್ರ, ಹೈಸ್ಕೂಲ್ ವಿಭಾಗ : ಪ್ರಕೃತಿ ಚಿತ್ರ ಡ್ರಾಯಿಂಗ್‌ಗೆ ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಸ್ಪರ್ಧಿಗಳು ತಮ್ಮ ಹೆಸರನ್ನು ಫೆಬ್ರವರಿ 8 ರಂದು ಸ್ಪರ್ಧೆಯ ಸ್ಥಳದಲ್ಲಿಯೇ ನೀಡಬಹುದು.
ಸ್ಪರ್ಧೆಗಳಲ್ಲಿ ಸಂಘಟಕರ ತೀರ್ಮಾನವೇ ಅಂತಿಮವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448253463, 9481761375 ನಂಬರನ್ನು ಸಂಪರ್ಕಿಸಬಹುದು ಎಂದು ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಪ್ರಕಟಣೆ ತಿಳಿಸಿದೆ.


























