ಪುತ್ತೂರು: ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಒಳಮೊಗ್ರು ಗ್ರಾಮವನ್ನು ಪ್ರತಿನಿಧಿಸಲು ವಿಶೇಷ ಆಹ್ವಾನಿತರಾಗಿ ಅವಕಾಶ ಪಡೆದಿರುವ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪಲ್ಲತಾರು ಇವರನ್ನು ಪುತ್ತೂರು ಬಿಜೆಪಿ ವತಿಯಿಂದ ಬಿಜೆಪಿ ಕಛೇರಿಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಉಜಿರೆಮಾರು , ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ ಬಿ , ಮಾಜಿ ಶಾಸಕರಾದ ಸಂಜೀವ ಮಠಂದೂರು , ಜಿಲ್ಲಾ ಎಸ್ ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ , ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್ , ಯುವರಾಜ್ ಪೆರಿಯತ್ತೋಡಿ, ಮಂಡಲ ಉಪಾಧ್ಯಕ್ಷರುಗಳಾದ ನಾಗೇಶ್ ಕೆಮ್ಮಾಯಿ , ವಿದ್ಯಾಧರ್ ಜೈನ್ , ದಿವ್ಯ ಪುರುಷೋತ್ತಮ್ , ವಿರೂಪಾಕ್ಷ ಭಟ್ , ಬಿಜೆಪಿ ಜಿಲ್ಲಾ ಫಲಾನುಭವಿಗಳ ಸಂಪರ್ಕ ಸಂಯೋಜಕರಾದ ನಿತೀಶ್ ಕುಮಾರ್ ಶಾಂತಿವನ , ಮನ ಕೀ ಬಾತ್ ಕಾರ್ಯಕ್ರಮದ ಮಂಡಲ ಸಂಚಾಲಕರಾದ ಪುರುಷೋತ್ತಮ್ ಮುಂಗ್ಲಿಮನೆ , ಬಿಜೆಪಿ ನಗರ ಯುವ ಮೋರ್ಚ ಉಪಾಧ್ಯಕ್ಷ ಸುನಿತ್ ಭಟ್, ನೆಟ್ಟನಿಗೆ ಮುಡ್ನೂರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ , ಅಜಿತ್ ರೈ ಹೊಸಮನೆ , ಒಳಮೊಗ್ರು ಶಕ್ತಿಕೇಂದ್ರ ಪ್ರಮುಖ್ ಮಹೇಶ್ ಕೇರಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
























