ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಒಟ್ಟು 5 ಲಕ್ಷ ರೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಬಿಡುಗಡೆಯಾಗಿದೆ.
ಪುತ್ತೂರು ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಪೆರುವಾಯಿ ಗ್ರಾಮದ ಕೆಳಗಿನ ಮನೆ ನಿವಾಸಿ ವಾರಿಜಾರವರಿಗೆ ರೂ 2 ಲಕಜ್ಷ ಹಾಗೂ ಸರ್ವೆ ಗ್ರಾಮದ ಮಹಮ್ಮದ್ ಅಮೀನ್ ರವರಿಗೆ 3 ಲಕ್ಷ ರೂ ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಮೊತ್ತ ಫಲಾನುಭವಿಗಳ ಖಾತೆಗೆ ನೇರ ಜಮಾವಣೆಯಾಗಲಿದೆ.
ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶ
5 ಲಕ್ಷ ರೂ ಪರಿಹಾರ ಬಿಡುಗಡೆ ಬೆಂಕಿ ಅಕಸ್ಮಿಕದಿಂದ ಅಂಗಡಿ ಬೆಂಕಿಗಾಹಗುತಿಯಾದ ಅಂಗಡಿ ಮಾಲಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ 5 ಲಕ್ಷ ಪರಿಹಾರ ಮಂಜೂರಾಗಿದೆ.
ವಿಟ್ಲ ಗ್ರಾಮದ ಮಂಕುಡೆಶಾಲಾ ಬಳಿ ಕುಡ್ತಮುಗೇರು ಕೊಳ್ನಾಡು ಸಂತೋಷ್ ಎಂಬವರ ಎಲೆಕ್ಟ್ರಿಕಲ್ ಬೆಂಕಿ ಅವಘದಿಂದ ಸುಮಾರು 80 ಲಕ್ಷ ರೂ ನಷ್ಟ ಸಂಭವಿಸಿತ್ತು. ಪರಿಹಾರಕ್ಕಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದರು. ಶಾಸಕರ ಶಿಫಾರಸ್ಸಿನಂತೆ ಅಂಗಡಿ ಮಾಲಕರಿಗೆ 5 ಲಕ್ಷ ಪರಿಹಾರ ಮಂಜೂರಾಗಿದೆ.


























