ಪುತ್ತೂರು: ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ನಿವಾಸಿ ಪುತ್ತೂರಿನಲ್ಲಿ ಆಟೋ ರಿಕ್ಷಾ ಚಾಲಕರಾಗಿರುವ ಮಹಮ್ಮದ್ ರಫೀಕ್ ಕೆ (40ವ)ರವರು ಆ.2ರಂದು ರಾತ್ರಿ ಬಾಡಿಗೆ ಇರುವುದಾಗಿ ತಿಳಿಸಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆಂದು ಅವರ ಪತ್ನಿ ದೂರು ನೀಡಿದ್ದಾರೆ.
ಮಹಮ್ಮದ್ ರಫೀಕ್ ಅವರು ಪ್ರತಿದಿನ ಪುತ್ತೂರಿನಲ್ಲಿ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಬರುತ್ತಿದ್ದು, ಆ.2ರಂದು ರಾತ್ರಿ ಸಮಯ 7.30ಕ್ಕೆ ಆಟೋ ರಿಕ್ಷಾ ಬಾಡಿಗೆ ಇರುವುದಾಗಿ ಮನೆಯಿಂದ ಹೋದವರು ಮನೆಗೆ ಬಂದಿಲ್ಲ. ಅವರ ಆಟೋ ರಿಕ್ಷಾ ಪುತ್ತೂರು ಖಾಸಗಿ ಬಸ್‌ನಿಲ್ದಾಣದ ಬಳಿ ನಿಲ್ಲಿಸಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಮಹಮ್ಮದ್ ರಫೀಕ್ ಅವರ ಪತ್ನಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಪತ್ತೆಯಾಗಿರುವ ಮಹಮ್ಮದ್ ರಫೀಕ್ ಅವರ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805335 ಮತ್ತು ಉಪನಿರೀಕ್ಷಕ 9480805363 ಅನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
























