ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು (ಖೋಟಾ ನೋಟುಗಳನ್ನು) ಮುದ್ರಿಸುತ್ತಿರುವ ಬಗ್ಗೆ, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸುತೇಶ್ ಕೆ ಪಿ, ರವರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿಯವರು ಸಿಬ್ಬಂದಿಗಳೊಂದಿಗೆ ದಿನಾಂಕ 16.07.2026 ರಂದು ಬೆಳಗ್ಗಿನ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆರೋಫಿತರಾದ 1) ಇಬ್ರಾಹಿಂ 2) ಶರೀಪ 3) ಸಂದೀಪ ಪುಂಡಲಿಕ ಶೋಳಂಬಿ 4) ಮಹಮ್ಮದ್ ನಬಾಸ್ 5) ಸಲ್ಮಾನ್ ಫಾರೀಸ್. 6) ಸಿರಾಜುದ್ದೀನ್. 7) ಇರ್ಷಾದ್ ಎಂಬವರುಗಳನ್ನು ವಶಕ್ಕೆ ಪಡೆದಿರುತ್ತಾರೆ . ಸ್ಥಳದಲ್ಲಿ 500 ಮುಖಬೆಲೆಯ ನೋಟು -1, 500 ರೂ ಮುಖ ಬೆಲೆಯ ನೋಟುಗಳಂತೆ ಕಾಣುವ A-4 ಸೈಜ್ ಹಾಳೆಗಳು-21 ಹಾಗೂ ಗಣಕಯಂತ್ರ, ಝರಾಕ್ಸ್ ಮೆಷಿನ್, ಸೀಲ್ ಗಳು ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸ್ವಾಧೀನಪಡಿಸಿಕೊಂಡು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2026 ಕಲಂ: 178 BNS-2023 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿಂದು ಮಣಿ ಆರ್ ಎನ್, ಐ.ಪಿ.ಎಸ್ ರವರು ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೊಗೀಶ್ ಬಿ, HC 193 ಮತ್ತು ನಿರಂಜನ್ ಎಂ ಎನ್, HC 190 ರವರುಗಳು, ದ.ಕ ಜಿಲ್ಲಾ ವಿಶೇ಼ಷ ಘಟಕದ ಪೊಲೀಸ್ ನಿರೀಕ್ಷಕರಾದ ನಂದಕುಮಾರ್ ರವರು ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ದೀಪಕ್, ಹೆಚ್.ಸಿ ಸತೀಶ್ ಹಾಗೂ ಹೆಚ್.ಸಿ ರೌಫ್ ರವರುಗಳು ಸದ್ರಿ ಜಾಲವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಲ್ಲಿ ಉಪ್ಪಿನಂಗಡಿ ಪಿ.ಎಸ್.ಐ ರವರೊಂದಿಗೆ ಸಹಕರಿಸಿರುತ್ತಾರೆ.
1) ಇಬ್ರಾಹಿಂ (60) ಪುತ್ತೂರು ಕಸಬ ಗ್ರಾಮ, ದ ಕ ಜಿಲ್ಲೆ. 2) ಶರೀಪ (51) ಚಂಗುಲ ಗ್ರಾಮ, ಕಾಸರಗೋಡುಜಿಲ್ಲೆ. 3) ಸಂದೀಪ ಪುಂಡಲಿಕ ಶೋಳಂಬಿ (30), ಹಳಿಯಾಳ ತಾಲೂಕು ಉತ್ತರ ಕನ್ನನಡ ಜಿಲ್ಲೆ.
4) ಮಹಮ್ಮದ್ ನಬಾಸ್ (37), ಆಮೂರು ಗ್ರಾಮ, ಕಾಸರಗೊಡು ಜಿಲ್ಲೆ. 5) ಸಲ್ಮಾನ್ ಫಾರೀಸ್ (25) ಒಳಮೊಗ್ರು ಗ್ರಾಮ, ಪುತ್ತೂರು
6) ಸಿರಾಜುದ್ದೀನ್ (34), ಉರುವಾಲು ಗ್ರಾಮ, ಬೆಳ್ತಂಗಡಿ 7) ಇರ್ಷಾದ್ (31) ಪುತ್ತಿಲ ಗ್ರಾಮ, ಬೆಳ್ತಂಗಡಿ
























