ಪುತ್ತೂರು: ಪಡೀಲ್ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಮತ್ತು ಪುತ್ತೂರು ಕಡೆಯಿಂದ ಪಡೀಲ್ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಗಳ ನಡುವೆ ಮುಖಾ ಮುಖ ಡಿಕ್ಕಿಯಾಗಿ ದ್ವಿಚಕ್ರ ವಾಹನಗಳ ಸವಾರರು ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾರಾಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾರು ಮತ್ತು ರಿಕ್ಷಾಗಳು ಇವತ್ತಿನಿಂದ ಈ ಮಾರ್ಗಗಳ ಮೂಲಕವಾಗಿ ಚಲಿಸುತ್ತಿದ್ದು, ಪಡಿಲಿನಿಂದ ಬೋಲ್ವಾರಿಗೆ ಚಲಿಸುವ ಮಾರ್ಗದಲ್ಲಿ, ದ್ವಿಚಕ್ರ ವಾಹನ ಸವಾರರು ಸರಿಯಾದ ಮಾಹಿತಿ ಇಲ್ಲದೆ, ಬಲಬದಿಯಿಂದ ಬರುವ ಮಾರ್ಗದಲ್ಲಿ ಚಲಿಸಿ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
























