ಪುತ್ತೂರು : ಕೋಡಿಂಬಾಡಿ ಗ್ರಾಮದ ಪಾದೆ ನಿವಾಸಿ ಶಿವಪ್ಪ ಗೌಡ ( 57 ವ) ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆ.31 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಕೋಡಿಂಬಾಡಿ ಮಹಮ್ಮದ್ ಅವರ ಭಾರತ್ ಬೀಡಿ ಬ್ರಾಂಚ್ ಅಲ್ಲಿ ಕೆಲಸ ಮಾಡಿ ಕೊಂಡು ಇದ್ದ ಇವರು ವರುಷದ ಹಿಂದೆ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಇದ್ದರು. ಮೃತರು ಪತ್ನಿ ಲೀಲಾವತಿ ಹಾಗೂ ಮಕ್ಕಳಾದ ಲಿತೇಶ್ ಮತ್ತು ಚೈತ್ರಾ ರವರನ್ನು ಅಗಲಿದ್ದಾರೆ.





















