ಪುತ್ತೂರು: ದಿನಾಂಕ 6 ಸೆಪ್ಟೆಂಬರ್ 2026ರಂದು ಉಪ್ಪಿನಂಗಡಿಯ ಹೆಚ್.ಎಂ ಆಡೋಟೋರಿಯಂ ನಲ್ಲಿ ಯುನೈಟೆಡ್ ಕರಾಟೆ ಬುಡಕಾನ್ ನ್ಯಾಷನಲ್ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ 2026 ಸ್ಪರ್ಧೆಯಲ್ಲಿ IKMA ಪುತ್ತೂರು ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಕು. ದೀಪ್ತ ಡಿ.ಕೆಯವರು ಕಟಾ ಹಾಗೂ ಕುಮಿಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಗಳಿಸಿರುತ್ತಾರೆ.
ಇವರು IKMA ಪುತ್ತೂರು ಶಾಖೆಯ ತರಬೇತುದಾರರಾದ ಶ್ರೀ ಶಿವಪ್ರಸಾದ್ ಕೆ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು ಸ.ಹಿ.ಪ್ರಾ.ಶಾಲೆ, ಹಾರಾಡಿ ಇಲ್ಲಿನ ನಾಲ್ಕನೇ ತರಗತಿ ವಿದ್ಯಾರ್ಥಿನಿ. ಇವರು ಬನ್ನೂರು ಕರ್ಮಲ ನಿವಾಸಿಯಾದ ಪ್ರಾಧ್ಯಾಪಕ ಶ್ರೀ ದೀಕ್ಷಿತ್ ಕುಮಾರ್ ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಲತಾ ಜಿ ಇವರ ಪುತ್ರಿ.

























