ಪುತ್ತೂರು : ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೂವಿನ ಮಾರುಕಟ್ಟೆಯಲ್ಲಿರುವ ಉಳ್ಳಾಲ್ತಿ ಪ್ಲವರ್ಸ್ ನಲ್ಲಿ ಉದ್ಯೋಗಿಯಾಗಿದ್ದ ಕಲ್ಲಾರೆ ನಿವಾಸಿ ಲವ ಕುಮಾರ್(43.ವ) ಸೆ.8 ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಲವ ಕುಮಾರ್ ರವರಿಗೆ ಸೆ.8 ರ ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಮನೆಮಂದಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆಂದು ತಿಳಿಸಿದ್ದಾರೆ.
ಮೃತರು ತಾಯಿ ನಿವೃತ್ತ ಕ್ಯಾಂಸ್ಕೋ ಉದ್ಯೋಗಿ ಕಮಲ ಲಿಂಗಪ್ಪ ಗೌಡ, ಪತ್ನಿ ಸಿಟಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯಶೋಧ, ಸಹೋದರರಾದ ಮಹಾಲಿಂಗೇಶ್ವರ ದೇವಾಲಯದ ಸಿಬಂದಿ ನಿತಿನ್ ಕುಮಾರ್ ಮತ್ತು ಪಂಜದಲ್ಲಿ ಸಮೃದ್ದಿ ಸ್ಕೆಲ್ ಬಜಾರ್ ಮಾಲೀಕ ಭವಿಷ್ಯತ್ ರವರನ್ನು ಅಗಲಿದ್ದಾರೆ.
























