ಪುತ್ತೂರು, ಸೆಪ್ಟೆಂಬರ್ 7. 2026: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು, ತನ್ನ ಶೈಕ್ಷಣಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಆಚರಿಸಲಿದ್ದು, ಕಾಲೇಜಿನ ಪ್ರಥಮ ಪದವೀಧರರ ಸಮಾರಂಭವು 2026ರ ಸೆಪ್ಟೆಂಬರ್ 11ರಂದು ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಚಾಲಕರಾದ ಅತಿ ವಂದನಿಯ ಡಾ| ಜೆ ಬಿ ಸಾಲ್ದಾನಃ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕಾಲೇಜಿನ ಪ್ರಥಮ ಪದವೀಧರರ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಸ್ವಾಯತ್ತ ಸಂಸ್ಥೆಯಾಗಿ ಕಾಲೇಜಿನ ನಿರಂತರ ಪ್ರಗತಿ ಮತ್ತು ಬೆಳವಣಿಗೆಯಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗುವುದರ ಜೊತೆಗೆ, ಶೈಕ್ಷಣಿಕ ಶ್ರೇಷ್ಠತೆ, ವ್ಯಕ್ತಿತ್ವ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕುರಿತಾಗಿ ಕಾಲೇಜು ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುವ ಸಂದರ್ಭವೂ ಆಗಿದೆ.
ಸ್ನಾಯತ್ತ ವ್ಯವಸ್ಥೆಯಡಿ ಪದವಿ ಪಡೆಯುತ್ತಿರುವ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡವನ್ನು ಅಧಿಕೃತವಾಗಿ ಗೌರವಿಸುವ ಮೂಲಕ ಈ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಲಿದೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ, ಶೈಕ್ಷಣಿಕ ನಾಯಕತ್ವ, ಬೋಧಕ ವರ್ಗ, ಸಿಬ್ಬಂದಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಒಂದೆಡೆ ಸೇರಿ ಪದವೀಧರ ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಾಧಕರ ಸಾಧನೆಗಳನ್ನು ಸ್ಮರಿಸಿ ಗೌರವಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್, ಮಂಗಳೂರು ಇದರ ಅಧ್ಯಕ್ಷರಾದ ಅತಿ ವಂದನೀಯ ಡಾ| ಪೀಟರ್ ಪಾಲ್ ಸಲ್ಮಾನ್ಯಾ ಅವರು ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕರಾದ ಪ್ರೊ. ಕವಿತಾ ಕೆ. ಆರ್.: ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ವಂದನೀಯ ಡಾ| ಪ್ರವೀಣ್ ಲಿಯೋ ಲಸ್ರಾದೊ ಹಾಗೂ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಸಂಚಾಲಕರಾದ ಅತಿ ವಂದನೀಯ ಡಾ| ಜೆ. ಬಿ. ಸಲ್ಮಾನ್ಹಾ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಪದವೀಧರರ ಸಮಾರಂಭವು ಕೇವಲ ಒಂದು ಔಪಚಾರಿಕ ಶೈಕ್ಷಣಿಕ ಕಾರ್ಯಕ್ರಮವಾಗಿರದೆ, ಹಲವು ವರ್ಷಗಳ ಕಲಿಕೆ, ಶಿಸ್ತು ಮತ್ತು ವೈಯಕ್ತಿಕ ಬೆಳವಣಿಗೆಯ ಪರಿಪೂರ್ಣತೆಯನ್ನು ಸಂಭ್ರಮಿಸುವ ಮಹತ್ವದ ಸಂದರ್ಭವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ, ಅವರ ಶೈಕ್ಷಣಿಕ ಪಯಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ಇಡೀ ಕಾಲೇಜು ಸಮುದಾಯ ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸುವ ಅವಕಾಶವೂ ಇದಾಗಿದೆ.
ಸಮಾರಂಭದ ಕಾರ್ಯಕ್ರಮಗಳು ಕ್ರಮಬದ್ಧವಾಗಿ, ಗೌರವಯುತವಾಗಿ ಹಾಗೂ ಸ್ಮರಣೀಯವಾಗಿ ನಡೆಯುವಂತೆ ಸಂಸ್ಥೆಯು ಸಮಗ್ರ ಸಿದ್ಧತೆಗಳನ್ನು ಕೈಗೊಂಡಿದೆ. ಶೈಕ್ಷಣಿಕ ಶಿಷ್ಟಾಚಾರ, ಸಮಾರಂಭದ ಅಧಿಕೃತ ಉಡುವು. ಶೈಕ್ಷಣಿಕ ಮೆರವಣಿಗೆ ಮತ್ತು ನಿರ್ಗಮನ ಮೆರವಣಿಗೆ, ಆಸನ ವ್ಯವಸ್ಥೆ ಶೈಕ್ಷಣಿಕ ಶ್ರೇಣಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳ ಗೌರವ ಹಾಗೂ ಪದವಿ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ವಿವಿಧ ಅಂಶಗಳಿಗೆ ವಿಶೇಷ ಗಮನ ನೀಡಲಾಗಿದೆ.
ಸಮಾರಂಭದಲ್ಲಿ ಆಡಳಿತ ಮಂಡಳಿ, ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಮಂಡಳಿ, ಬೋಧಕ ವರ್ಗ, ಸಿಬ್ಬಂದಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಾರ್ಡನ್ಗಳು, ಗಣ್ಯ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಇದು ಇಡೀ ಸಂಸ್ಥೆಯ ಸಮುದಾಯವನ್ನು ಒಂದೆಡೆ ಸೇರಿಸುವ ಮಹತ್ವದ ಸಮಾರಂಭವಾಗಲಿದೆ.
“ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಪ್ರಥಮ ಪದವೀಧರರ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಹಾಗೂ ಸ್ಮರಣೀಯ ಸಂದರ್ಭವಾಗಿದ್ದು, ಶೈಕ್ಷಣಿಕ ಶ್ರೇಷ್ಠತೆ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕುರಿತಾದ ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸಲಿದೆ.”
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ/ ಆಂಟನಿ ಪ್ರಕಾಶ್ ಮೊಂತೆರೊ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಮೊಳೆಯರ್, ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ/ ವಿನಯಚಂದ್ರ ಶೈಕ್ಷಣಿಕ ವಿಭಾಗದ ರಿಜಿಸ್ಟ್ರಾರ್ ಡಾ| ನಾರ್ಬಟ್್ರ ಮಸ್ಕರೇನ್ಹಸ್, ಪುತ್ತೂರು ಮಾಯಿ ದೆ ದೇವುಸ್ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರೋಶನ್ ಲಸ್ರಾದೋ, ಹಾಗೂ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ। ಭಾರತಿ ಎಸ್. ರೈ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

























