ಪುತ್ತೂರು: ಸಮಾಜದ ಸಮಯೋಚಿತ ವರದಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ನಿಮಿಷ ನ್ಯೂಸ್ ಪುತ್ತೂರು ಇದರ ಉದ್ಘಾಟನೆಯು ಸೆ.9ರಂದು ಬೈಪಾಸ್ ರಸ್ತೆಯಲ್ಲಿರುವ ಬಪ್ಪಳಿಗೆ ಟವರ್ಸ್ನಲ್ಲಿ ನಡೆಯಲಿದೆ ಎಂದು ನಿಮಿಷ ನ್ಯೂಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಲಾಲ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮವನ್ನು ಪ್ರಾರಂಭಿಸಬೇಕು ಎಂಬ ಕಳೆದ ಹಲವು ವರ್ಷಗಳ ನಮ್ಮ ಕನಸು ಈಗ ನನಸಾಗಿದೆ. ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಜನರಿಂದ ಅಧಿಕಾರಿಗಳ ತನಕ ತಲುಪಿಸಲಾಗವುದು. ವಸ್ತು ನಿಷ್ಠ ವರದಿಯೊಂದಿಗೆ ಸತ್ಯದ, ಜನರ ಪರವಾಗಿ ವರದಿ ಮಾಡಲಿದೆ.
ಯಾರ ಪರ, ಯಾರ ವಿರೋಧವೂ ಆಗಿರದೆ, ಸಮಸ್ಯೆಯಿಂದ ಸಾಧನೆಯ ಕಡೆಗೆ, ಪ್ರಶ್ನೆಯಿಂದ ಪರಿಹಾರದ ತನಕ ನಿರಂತರವಾಗಿ ಕೆಲಸ ಮಾಡಲಿದೆ. ಸಮಾಜದ ಜನರ ನೋವಿನಿಂದ ಬೆಳಕಿನ ವರೆಗೆ ಕೆಲಸ ಮಾಡಲಿದೆ. ಯೂ ಟ್ಯೂಬ್, ವೆಬ್ನ್ಯೂಸ್, ಫೆಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಪ್ರಾರಂಭದಲ್ಲಿ ಕೆಲಸ ಮಾಡಲಿದೆ. ತೆರೆಮರೆಯ ಹಿಂದಿರುವ ಸಾಧಕರನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ಹೊಸ ದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಸ್ ಪ್ರಕಾಶ್ ದೀಪ ಪ್ರಜ್ವಲಿಸಲಿದ್ದಾರೆ. ಆದರ್ಶ ಆಸ್ಪತ್ರೆಯ ಡಾ. ಎಂ.ಕೆ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟ ಕಚೇರಿ ಉದ್ಘಾಟಿಸಲಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಲೋಗೋ ಅನಾವರಣಗೊಳಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಡಿವೈಎಸ್ಪಿ ಪ್ರಮೋದ್ ಕುಮಾರ್, ಕ್ಯಾಂಪ್ರೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ, ಯು,ಆರ್ ಪ್ರಾಪರ್ಟಿಸ್ನ ಉಜ್ವಲ್ ಪ್ರಭು, ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ರಾಮದಾಸ ಶೆಟ್ಟಿ ವಿಟ್ಲ, ನಗರ ಸಭಾ ಮಾಜಿ ಸದಸ್ಯ ಅಶೋಕ್ ಶೆಣೈ, ಬಪ್ಪಳಿಗೆ ಟವರ್ಸ್ನ ಮ್ಹಾಲಕ ಅಮರನಾಥ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

























