ಪುತ್ತೂರು ದಿ.25/9/2026 ರ ಶುಕ್ರವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ 300 ಬೆಡ್ ನ ಮೆಡಿಕಲ್ ಆಸ್ಪತ್ರೆಗೆ ಶುಭ ಮುಹೂರ್ಥದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಅವರು ಭಾಗವಹಿಸಲಿದ್ದಾರೆ.
ಸೇಡಿಯಾಪು ಪುತ್ತೂರಿನ ಬಹುಜನರ ಬೇಡಿಕೆಯ ಮೆಡಿಕಲ್ ಕಾಲೇಜು ಮತ್ತು ಮೆಡಿಕಲ್ ಆಸ್ಪತ್ತೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ ಇದು ಶೀಘ್ರವೇ ನಡೆಯಲಿದೆ.
ಆಸ್ಪತ್ರೆ ಯೋಜನೆಗೆ ಸಂಬಂಧಿಸಿದಂತೆ ಭೂಮಿ ಪೂಜೆ/ಶಿಲಾನ್ಯಾಸ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ ಎಂಬ ಮಾಹಿತಿ ಲಭ್ಯವಿದೆ. ಯೋಜನೆ ಬನ್ನೂರು ಗ್ರಾಮದ ಸೀಡಿಯಾಪು ಪ್ರದೇಶದ 40 ಎಕರೆ ಜಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಬಹುದಿನಗಳ ನಿರೀಕ್ಷೆಯಲ್ಲಿದ್ದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಯೋಜನೆಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ಪುತ್ತೂರು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಉತ್ತಮ ವೈದ್ಯಕೀಯ ಸೇವೆ ದೊರೆಯುವ ನಿರೀಕ್ಷೆ ಮೂಡಿದೆ.
























