ಕಡಬ: ದಿನಾಂಕ :25/9/2026ರಂದು ಶುಕ್ರವಾರ ದಂದು ಬೆಳಿಗ್ಗೆ 10.30ಗಂಟೆಗೆ ಸರಿಯಾಗಿ ಕಡಬ ತಾಲ್ಲೂಕು ಪಂಚಾಯತ್ ಸಭಾಂಗಣ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲ್ಲೂಕು ಕಾನೂನು ಸೇವೆ ಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು( ರಿ )ಕಡಬ ತಾಲ್ಲೂಕು ಪಂಚಾಯತ್ ಕಾರ್ಯಾಲಯ, ಕಡಬ ಪಟ್ಟಣ ಪಂಚಾಯತ್, ಹಾಗೂ ಕಡಬ ತಾಲ್ಲೂಕು ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತರ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ
ಕಡಬ ತಾಲ್ಲೂಕು ಮಟ್ಟದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ ಉದ್ಘಾಟನೆಯನ್ನು ಕು. ರಮ್ಯ.ಆರ್ ಗೌರವಾನ್ವಿತ 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ jmfc ಪುತ್ತೂರು ಮಾಡಿದ್ದರು. ಕು. ರಮ್ಯ.ಆರ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತಾನಾಡಿ ಹಿರಿಯ ನಾಗರಿಕರ ಮಾರ್ಗದರ್ಶನ ದಂತೆ ಕಿರಿಯರಾದ ಹಿರಿಯ ನಾಗರಿಕರನ್ನು ತಂದೆ ತಾಯಿಯ ಮಾರ್ಗದರ್ಶನ ದಂತೆ ನಡೆಯಬೇಕು. ವೃದಾಪ್ಯದಲ್ಲಿ ಯೋಗಕ್ಷೇಮ ನೋಡಿ ಕೊಳ್ಳಬೇಕು ಮಕ್ಕಳು ಹಿರಿಯ ನಾಗರಿಕರ ಮಾರ್ಗದರ್ಶನ ದಂತೆ ದೇವರರಂತೆ ಗೌರವ ಕೊಡಬೇಕು ಎಂದು ಸಲಹೆ ನೀಡಿದ್ದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ರಾದ ಸಂತೋಷ್ ಕುಮಾರ್ ಎಂ ರವರು ಸಭೆಯನ್ನು ಉದ್ದೇಶಿಸಿ ಮಾತಾನಾಡಿ ಹಿರಿಯ ನಾಗರಿಕರ ನಮ್ಮಗೆ ಉತ್ತಮ ಮಾರ್ಗದರ್ಶನ ಮಾರ್ಗದರ್ಶನ ವಿದ್ಯಾಭ್ಯಾಸ ನೀಡಿ ನಮ್ಮನ್ನು ತಂದೆ ತಾಯಿ ಕಷ್ಟ ಪಟ್ಟು ಬೆಳಿಸಿರುತ್ತಾರೆ. ನಾವು ತಂದೆ ತಾಯಿಯವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಮಕ್ಕಳು ಅವರ ಯೋಗ ಯೋಗಕ್ಷೇಮ ಸಲಹೆ ನೀಡಿದ್ದರು.
ಸಭೆಯಲ್ಲಿ ಕಡಬ ತಾಲ್ಲೂಕು ಪಂಚಾಯತ್ ಪರವಾಗಿ ಆಗಮಿಸಿದ ಕಡಬ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶ್ರೀ ನಾರಾಯಣ. ಬಿ ಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಯಾಗಿ ಕಡಬ ತಾಲ್ಲೂಕು ಉಪ ತಹಸೀಲ್ದಾರ್ ಎಸ್. ಎನ್ ಶಾಯದುಲ್ಲಾ ಖಾನ್. ಪುತ್ತೂರು ಶಿಕ್ಷಣಾಧಿಕಾರಿ ಪರವಾಗಿ ಆಗಮಿಸಿದ crp ಶ್ರೀ ಗಣೇಶ್, ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಮತಿ ಪುಷ್ಪ ವತಿ. ಡಿ ಕಡಬ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಶಿವ ರಾಮ. ಡಿ, ಶ್ರೀ ಮಾಮಚ್ಚನ್.
ಎಂ ಮೇಲ್ವಿಚಾರಕರು ಮತ್ತು ನೋಡೆಲ್ ಅಧಿಕಾರಿಗಳು ಯುವ ಸಬಲೀಕರಣ ಇಲಾಖೆ ಪುತ್ತೂರು, ಶ್ರೀ ಅಬ್ಬಾಸ್ ಕುಂತೂರು ನಿವೃತ್ತ ಸಂಚಾರ ನಿಯಂತ್ರಕರು ಮತ್ತು ಬಸ್ ನಿಲ್ದಾಣ ಮೇಲುಸ್ತುವಾರಿ ಕೆ ಆರ್ ಟಿ ಸಿ ಪುತ್ತೂರು ಘಟಕ, ಆನಂದ. ಎ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾದ ಶ್ರೀ ಕಕ್ವೆ ಕೃಷ್ಣಪ್ಪ ಗೌಡ ವಕೀಲರಾದ ಶ್ರೀ ಲೋಕೇಶ್,ವಕೀಲರಾದ ಶ್ರೀ ಅವಿನಾಶ್ ಬೈತ್ತಡ್ಕ ಶ್ರೀ ಜಗದೀಶ ಉದ್ದೇರಿ ಶ್ರೀಮತಿ ರಮ್ಲತ್. ಎಂ ಪ್ಯಾನೆಲ್ ವಕೀಲರು ಹಾಗೂ ಕಾನೂನು ಸಮಿತಿ ಸಿಬ್ಬಂದಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಡಬ ತಾಲ್ಲೂಕು ಬಿಳಿನೆಲೆ ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ವಿಜಯ್ ಕುಮಾರ್ ಎರ್ಕ ಹಾಗೂ ಶಿರಾಡಿ ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ಸುನಿಲ್ ಪಿ. ವಿ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಬೆಳಂದೂರು ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ಶ್ರೀಮತಿ ಪ್ರಶಾಂತಿ ಆನಂದ ಗೌಡ ಮತ್ತು ತಂಡದವರು ನಾಡ ಗೀತೆ ಹಾಡಿದ್ದರು. ಕಡಬ ತಾಲ್ಲೂಕು ಗೋಳಿ ತೊಟ್ಟು ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ಕು. ತುಳಸಿ ಸ್ವಾಗತಿಸಿದ್ದರು. ಕಡಬ ತಾಲ್ಲೂಕು ಬೆಳಂದೂರು ಗ್ರಾಮೀಣ ಪುನರ್ ವಸತಿ ಕಾರ್ಯ ಕರ್ತರಾದ ಶ್ರೀಮತಿ ಪ್ರಶಾಂತಿ ಆನಂದ ಗೌಡ ರವ ರು ಧನ್ಯವಾದ ಸಮರ್ಪಣೆ ಮಾಡಿದರು. ಕಡಬ ತಾಲ್ಲೂಕು ಎಲ್ಲಾ ವಿಕಲ ಚೇತನರ ಇಲಾಖೆಯ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯ ಕರ್ತರು ಕಾರ್ಯಕ್ರಮ ಯಶಸ್ವಿ ಯಾಗಲು ಉತ್ತಮ ಸಹಕಾರ ನೀಡಿದ್ದರು.
























