ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ನಗರದ ಬಿಷಪ್ಸ್ ಹೌಸ್‌ನಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ವಂದನೀಯ ಫಾದರ್ ರೂಪೇಶ್ ಮಾಡ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಾನ್ ಬಿ. ಮೊಂತೆರೋ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಕಾಶ್ ಸಿಕ್ವೇರಾ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೆಲ್ವಿನ್ ಡಿಸೋಜಾ, ಭೂ ನ್ಯಾಯಮಂಡಳಿ ಸದಸ್ಯ ನೆಲ್ಸನ್ ಮೊಂತೆರೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ನವೀನ್ ಲೋಬೋ,
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಲ್ಯಾನ್ಸ್ಲಾಟ್ ಪಿಂಟೋ, ಮಂಗಳೂರು ದಕ್ಷಿಣ ಎನ್‌ಎಸ್‌ಯುಐ (NSUI) ಅಧ್ಯಕ್ಷ ಕ್ರಿಸ್ಟನ್ ಮೆನೆಜಸ್, ಮುಖಂಡರಾದ ನ್ಯಾನ್ಸಿ ನೊರೊನ್ಹಾ, ಆಲ್ಸ್ಟನ್ ಡಿಕುನ್ಹಾ, ವಿಲ್ಫ್ರೆಡ್ ಮೊಂತೆರೋ, ಪಯಸ್ ಮೊಂತೆರೋ, ಲ್ಯಾನ್ಸಿ ಲಸ್ರಾದೊ, ಅವಿತಾ ನೊರೊನ್ಹಾ, ನೀತು ಡಿಸೋಜಾ, ಮೇರಿ ಪಿಂಟೋ, ರೀಟಾ ಡಿಸೋಜಾ, ಸ್ಟಾನ್ಲಿ ಬಂಟ್ವಾಳ್, ವೀಣಾ, ನ್ಯಾಯವಾದಿ ಎ. ಪಿ. ಮೊಂತೆರೋ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

























