ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆ ಕೇಪುಳು ಬಳಿ ರಸ್ತೆ ಬದಿ ಜಾಗವನ್ನು ಸಮತಟ್ಟು ಮಾಡಿ ಅಕ್ರಮ ಅಂಗಡಿ ನಿರ್ಮಾಣ. ಕೇಪುಳು ರಸ್ತೆ ಬದಿಯಲ್ಲಿ ಮನೆಯ ಎದುರೇ ರಾತ್ರೋರಾತ್ರಿ ಅಕ್ರಮವಾಗಿ ಗೂಡಂಗಡಿ ನಿರ್ಮಿಸಲಾಗಿದೆ ಎಂದು ನಗರಸಭೆಗೆ ದೂರು ನೀಡಲಾಗಿದೆ.
ಕೇಪುಳು ಜಂಕ್ಷನ್ ನಿವಾಸಿ ಮೊಹಮ್ಮದ್ ಶಾಫಿ ಅವರ ಮನೆಯ ಎದುರು ಭಾಗದಲ್ಲಿ ಉಮ್ಮರ್ ಎಂಬವರು ಅಕ್ರಮವಾಗಿ ಗೂಡಂಗಡಿ ನಿರ್ಮಿಸಿ ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಈ ಗೂಡಂಗಡಿಯಿಂದ ಮನೆಯ ವಾಸ್ತವ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ತಿರುವು ರಸ್ತೆಯಲ್ಲಿರುವುದರಿಂದ ಅಪಘಾತದ ಸಾಧ್ಯತೆಯೂ ಹೆಚ್ಚಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
























