ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ವೈಭವದ ಪುನರ್ ಪ್ರತಿಷ್ಟ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಬ್ರಹ್ಮರಥ ಸಮರ್ಪಣೆಗೊಂಡು ಬ್ರಹ್ಮರಥೋತ್ಸವ ನಡೆದಿತ್ತು.
ಇದರ ತರುವಾಯ 48 ದಿನಗಳ ಬಳಿಕ ದೃಢಕಲಶವು ಮೇ 12 ರಂದು ನಡೆಯಿತು.ವೈದಿಕ ವಿಧಿವಿಧಾನಗಳನ್ನು ಕೆಮ್ಮಿಂಜೆ ನಾಗೇಶ ತಂತ್ರಿಗಳು ನೇತೃತ್ವದಲ್ಲಿ ನಡೆಯಿತು.ಇದೇ ಸಂಧರ್ಭದಲ್ಲಿ ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಗೌರವಿಸಲಾಯಿತು.
ಕಾರಣಿಕದ ಕ್ಷೇತ್ರ ಎಂಬುದಕ್ಕೆ ಮತ್ತೆ ನಿದರ್ಶನ. ದೃಢಕಲಶದ ಸಂಧರ್ಭದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಇದರ ನಂತರ ಎರಡು ಗಂಟೆಗಳ ಅವಧಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿರುವುದು ಕಾರಣಿಕವೇ ಸರಿ ಎಂಬುದಾಗಿ ಮಾತುಗಳು ಕೇಳಿಬರುತ್ತಿದೆ.
ಈ ಹಿಂದೆ ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ದಿನಗಳ ಕೊನೆಯ ತನಕ ಯಾವುದೇ ಕೆಲಸವು ಪೂರ್ಣಗೊಳ್ಳದೇ ಇದ್ದರು, ಬ್ರಹ್ಮಕಲಶದ ಆರಂಭದ ದಿನ ಎಲ್ಲ ಕೆಲಸವು ಪೂರ್ಣಗೊಂಡಿದ್ದು ಕೂಡ ಕಾರಣಿಕದ ನಿದರ್ಶನವೇ ಸರಿ ಎಂಬುದಾಗಿ ಊರಿನವರ ಮಾತು ಕೇಳಿಬರುತ್ತಿದೆ.ಅದಲ್ಲದೇ ಬೇರೆ ಬೇರೆ ಹರಕೆಗಳ ಮೂಲಕ ಕಷ್ಟ ಪರಿಹರಿಸುವ ಪುಣ್ಯಕ್ಷೇತ್ರ ಇದಾಗಿದೆ ಎಂಬುದು ತಿಳಿಯಬಹುದಾಗಿದೆ.