ಉಡುಪಿ: ತಕ್ಷಣ ಗುಟ್ಕಾ, ಸಾರಾಯಿ ಬಿಟ್ಟವರು ಯಾವ ರೀತಿ ವರ್ತಿಸುತ್ತಾರೋ. ಆ ರೀತಿ ಅಧಿಕಾರ ಇಲ್ಲದವರು ವರ್ತಿಸುತ್ತಿದ್ದಾರೆ. ಬಂಡಾಯ ಅಭ್ಯರ್ಥಿ ರಘಪತಿ ಭಟ್ ಮತ್ತು ಕೆ ಎಸ್ ಈಶ್ವರಪ್ಪ ವಿರುದ್ಧ ಬಿ ಎಲ್ ಸಂತೋಷ್ ವಾಗ್ದಾಳಿ-
ಒಬ್ಬರಿಗೇ ಟಕೆಟ್ ಕೊಡಬೇಕು ಎಂದರೇ ನಾವೆಲ್ಲಿ ಹೋಗಬೇಕು. ಹಾಗಾದರೇ ಕಾರ್ಯಕರ್ತರು ನಾಯಕರಾಗೋದು ಯಾವಾಗ ಪ್ರಶ್ನಿಸುವ ಜೊತೆಗೆ ಇವರೆಲ್ಲ ಅಧಿಕಾರದಿಂದ ಇಳಿದು ಸರಿಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಇವರಿಗೇ ಟಿಕೇಟ್ ಕೊಡಬೇಕೆಂದರೆ ಎಷ್ಟು ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಉಡುಪಿ ಬಿಜೆಪಿ ಕಾರ್ಯಕ್ರಮದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಪ್ರಚಾರವು ಕೊನೆಯ ಹಂತಕ್ಕೆ ತಲುಪುತಿದ್ದು ಪರಿಷತ್ ಚುನಾವಣೆ ಸಲುವಾಗಿ ಇಂದು ಉಡುಪಿಯಲ್ಲಿ ನಡೆದ ಘಟ ನಾಯಕರ ಸಭೆಯಲ್ಲಿ ಮಾತಾನಾಡಿದ ಬಿ ಎಲ್ ಸಂತೋಷ್ ನಿಮ್ಮಗಳ ವೈಯಕ್ತಿಕ ಸ್ವಾರ್ಥದಿಂದ ಈ ನಿರ್ಧಾರ ಕೈಗೊಂಡಿದ್ದೀರಿ ಅದನ್ನು ಕಾರ್ಯಕರ್ತರ ಮೇಲೆ ಹಾಕುತ್ತಿದ್ದೀರಿ.
ಇದು ಪವಾಡ ಪುರುಷರ ಕಾಲವಲ್ಲ, ಬದಲಾಗಿ ಸಂಘಟನೆಗೆ ಮಾತ್ರ ಶಕ್ತಿ.ತಕ್ಷಣ ಪಕ್ಷ ಬಿಟ್ಟು ಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ ಪಕ್ಷ ಬಲಪಡಿಸಿ ಬಹುಮತದಿಂದ ಮಾತ್ರ ಅಧಿಕಾರ ನಡೆಸಲು ಸಾಧ್ಯ ಅಧಿಕಾರ ಇಂದು ಬರುತ್ತದೆ ನಾಳೆ ಇಲ್ಕದಾಗುತ್ತದೆ. ಅಧಿಕಾರದ ಆಸೆಯಿಂದ ಪಕ್ಷ ತೊರೆಯಬೇಡಿ.
ಅಲ್ಲ ಅಧಿಕಾರ ಎನೂ ಅಯಸ್ಕಾಂತ ಇದೆಯಾ..? ಅಂತ ಸೆಳೆತದ ಮ್ಯಾಗ್ನೆಟ್ ಏನಿದೆ ಎಂದು ಪ್ರಶ್ನಿಸಿದ ಅವರು ಹಿಂದುತ್ವಕ್ಕಾಗಿಯಾ, ಸ್ಥಳೀಯರ ಸಮಸ್ಯೆಗಳಿಗ ಯಾವ ಕಾರಣಕ್ಕೆ ಬಂಡಾಯವೆದ್ದೀರಿ..? ಇದನ್ನೆಲ್ಲ ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ. ನಿಮ್ಮ ಆತ್ಮಸಾಕ್ಷಿ ಎಷ್ಟಿದೆ ಎಂಬುದು ಎಲ್ಲರಿಗೆ ತಿಳಿದಾಗಿದೆ ಎಂದು ಪರೋಕ್ಷವಾಗಿ ನುಡಿದರು.
ದೇಶದಲ್ಲಿ ಬಿಜೆಪಿ ಭದ್ರವಾಗಿದೆ, ಈ ಬಾರಿಯು ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗುತ್ತದೆ. ದೇಶದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದೆ.ಭಾಜಪ ಶಕ್ತಿಯುತವಾಗಿದೆ.
ರಾಮಮಂದಿರ ನಿರ್ಮಾಣದಲ್ಲಿ ಭಾಜಪ ಕಾರ್ಯ ಏನೂ ಎಂಬುದು ತಿಳಿದಿದೆ.ಎಲ್ಲರೂ ನಮ್ಮ ಎರಡು ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುವಂತೆ ವಿನಂತಿಸಿದರು.ಈ ಸಂಧರ್ಭದಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ,ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,ಕೋಟಾ ಶ್ರೀನಿವಾಸ್ ಪೂಜಾರಿ,ಪ್ರಮೋದ್ ಮಧ್ವರಾಜ್,ಕಾಪು ಶಾಸಕ ಸುನೀಲ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು