ಸೋಮವಾರ ಸಂಜೆ ಪುತ್ತೂರಿನಲ್ಲಿ ಗುಡುಗು ಸಿಡಿಲಿನ ಭಾರೀ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಪುತ್ತೂರಿನ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿತ್ತು. ಭಾರೀ ಮಳೆಗೆ ನದಿಯಂತಾದ ಪುತ್ತೂರಿನ ರಸ್ತೆಗಳು. ಭಾರೀ ಮಳೆಗೆ ಪುತ್ತೂರಿನ ರಸ್ತೆಗಳು ನದಿಯಂತಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು.
ಪುತ್ತೂರಿನ ದರ್ಬೆಯ ಅಂಗಡಿ ಹಾಗೂ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಗಳು ಜಲಾವೃತಗೊಂಡಿತ್ತು. ಪುತ್ತೂರು: ಭಾರಿ ಮಳೆಗೆ ಕೋರ್ಟ್ ರಸ್ತೆಯಲ್ಲಿನ ಚಿನ್ನದಂಗಡಿಗೆ ಮತ್ತು ಪಕ್ಕದ ಫ್ಯಾನ್ಸಿ ಅಂಗಡಿಗೆ ಮಳೆ ನೀರು ನುಗ್ಗಿದೆ.
ಕೋರ್ಟ್‌ರಸ್ತೆ, ದರ್ಬೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ. ಎಪಿಎಂಸಿ ರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಪಡುವಂತಾಯಿತು. ಕೋರ್ಟ್‌ರಸ್ತೆಯಲ್ಲಿ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಭಾರಿ ಮಳೆಗೆ ದರ್ಬೆಯಲ್ಲಿ ಕಿರಿದಾದ ರಾಜಕಾಲುವೆಯಿಂದ ಉಕ್ಕಿದ ಮಳೆ ನೀರು ಮನೆಯೊಳಗೆ ನುಗ್ಗಿ ಮನೆ ಸಾಮಾಗ್ರಿಗಳೆಲ್ಲ ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದೆ ಈ ಅವಾಂತರಕ್ಕೆ ಕಾರಣ ಎಂದು ಕಿಡಿಕಾರಿದರು.