ಲಕ್ನೋ: ಸರ್ಕಾರಿ ನೌಕರನೊಬ್ಬನ ಮನೆಗೆ ದರೋಡೆ ಮಾಡಲು ಬಂದ ಕಳ್ಳನೊಬ್ಬ ಕೂಲಿಂಗ್ ಎಸಿ ಪ್ರಭಾವದಿಂದ ನಿದ್ದೆಗೆ ಜಾರಿದ ಘಟನೆ ಲಕ್ನೋದಲ್ಲಿ ನಡೆದಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಳ್ಳತನದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮನೆಗೆ ಬಂದಾಗ ಬಹಳಷ್ಟು ವಸ್ತುಗಳನ್ನು ಕಳ್ಳರು ಕದ್ದೊಯ್ದಿರುವುದು ತಿಳಿದು ಬಂದಿದೆ. ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾಗ ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಂಡು ಅವರು ಬೆಚ್ಚಿಬಿದ್ದರು. ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಅವನೂ ಗಾಬರಿಗೊಂಡಿದ್ದಾನೆ. ಬಳಿಕ ಪೊಲೀಸರಿಗೆ ಸಂಪೂರ್ಣ ಕಥೆಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದರು.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದನು. ಇತರ ದರೋಡೆಕೋರರ ಜೊತೆಯಲ್ಲಿ ಮನೆಗೆ ಪ್ರವೇಶಿಸಿದ ಈತ ಗಾಢವಾದ ನಿದ್ರೆಯಿಂದ ಎಚ್ಚರವಾಗಲೇ ಇಲ್ಲ. ಹೀಗಾಗಿ ಇತರರು ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ವಾರಣಾಸಿಯಲ್ಲಿ ನಿಯೋಜನೆಗೊಂಡಿರುವ ಸರ್ಕಾರಿ ನೌಕರನಿಗೆ ಸೇರಿದ ಇಂದಿರಾನಗರದ ಸೆಕ್ಟರ್ 20ರ ಮನೆಗೆ ಕಳ್ಳರ ತಂಡ ನುಗ್ಗಿದೆ. ಕಳ್ಳರು ಈ ಮನೆಯಿಂದ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೋಗಿದ್ದಾರೆ. ರೂಮಿನಲ್ಲಿದ್ದ ಎಸಿಯ ಕೆಳಗೆ ಕಳ್ಳ ಮಲಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾನೆ. ಆದರೆ ಯಾವುದೋ ನಶೆಯಲ್ಲಿದ್ದ ಈತ ಇನ್ವರ್ಟರ್ ಎತ್ತಲು ಹೋಗಿದ್ದಾನೆ. ಆದರೆ ಅದಕ್ಕೂ ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಕೋಣೆಯಲ್ಲಿದ್ದ ಎಸಿ ಸ್ವಿಚ್ ಆನ್ ಮಾಡಿ ಅಲ್ಲೇ ಗಟ್ಟಿಯಾಗಿ ನಿದ್ದೆಗೆ ಜಾರಿದ್ದಾನೆ.