ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ಹಲವಾರು ಪ್ರಶಸ್ತಿ ಪುರಸ್ಕೃತರಾದ ರಾಮೋಜಿ ರಾವ್ (87) ಶನಿವಾರ ಜೂನ್ 08 ರಂದು ಅಸ್ತಂಗತರಾಗಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು.
ಮಾರ್ಗದರ್ಶಿ ಬದುಕು ನಡೆಸಿದ ಮಾಧ್ಯಮ ಕಾಯಕಯೋಗಿ : ರೈತ ಮಗನಾಗಿ ಜನಿಸಿದ ರಾವ್ ಹಲವು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದವರು. ರಾಮೋಜಿ ರಾವ್ ಚಿಟ್ ಫಂಡ್‌ಗಳೊಂದಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ ಇವರು 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ʻಈನಾಡುʼ ದಿನಪತ್ರಿಕೆ ಮೂಲಕ ತೆಲುಗು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿ ಬರೆದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ದಿನಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮದಲ್ಲಿ “ಈನಾಡು” ದಿನಪತ್ರಿಕೆ ಹೊಸ ಯುಗಕ್ಕೆ ನಾಂದಿ ಹಾಡಿತು. ಈನಾಡು ಆರಂಭವಾಗಿ ನಾಲ್ಕು ವರ್ಷಗಳಲ್ಲಿ ಓದುಗರು ಮೆಚ್ಚಿಕೊಂಡರು. ಸಿತಾರಾ ಸಿನಿಪತ್ರಿಕೆಯನ್ನೂ ರಾಮೋಜಿ ರಾವ್ ಆರಂಭಿಸಿದರು. ಇದು ಅವರ ಯಶಸ್ಸಿಗೆ ಪ್ರಮುಖ ಮೈಲಿಗಲ್ಲು ಆಗಿದೆ. ನಂತರದಲ್ಲಿ ಸ್ಥಳೀಯ ಜಾಹೀರಾತು, ಆವೃತ್ತಿಗಳನ್ನು ಪ್ರಾರಂಭಿಸಿ. ಎಷ್ಟೋ ಹಿಂದಿ ಪತ್ರಿಕೆಗಳು ಅವರಿಂದ ಈ ಪಾಠ ಕಲಿತವು. ಕೃಷಿ ಮತ್ತು ರೈತರಿಗೆ ಅರಿವು ಮೂಡಿಸುವ ಅನ್ನದಾತ ಪತ್ರಿಕೆಯೊಂದಿಗೆ ಆರಂಭವಾದ ಅವರ ಮಾಧ್ಯಮ ಲೋಕದ ಪಯಣ ರಾಮೋಜಿ ಗ್ರೂಪ್ ಎಂಬ ಸಂಸ್ಥೆ ಹುಟ್ಟುಹಾಕುವ ಮಟ್ಟಕ್ಕೆ ಬೆಳೆಯಿತು. ಜಾಣ್ಮೆ ಮತ್ತು ಉತ್ತಮ ವ್ಯವಹಾರವೇ ಅವರ ಗೆಲುವಿನ ಮೂಲ ಚಿತ್ರಣವಾಯಿತು.
ಪತ್ರಿಕೋದ್ಯಮದಿಂದ ಸಿನಿಮಾ ಲೋಕಕ್ಕೆ ರಾಮೋಜಿ:
ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ನಿರ್ಮಿಸಲು ಆರಂಭಿಸಿ ನಿರ್ಮಾಪಕರಾದ ರಾವ್ ಮಾಧ್ಯಮ ಉದ್ಯಮಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಇದೇ ಕಾರಣಕ್ಕೆ ಅವರನ್ನು “ಮಾಧ್ಯಮ ಲೋಕದ ಭೀಷ್ಮ” ಎಂದೇ ಕರೆಯಲಾಗುತ್ತದೆ.
ಇದರ ಜೊತೆಗೆ ರಾಮೋಜಿ ಫಿಲ್ಮ್‌ಸಿಟಿ ನಿರ್ಮಿಸಿದರು. ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ರೈತ ಯೋಧ ರಾಮೋಜಿ ರಾವ್. ರೈತನ ಮಗನಾಗಿ ಹುಟ್ಟಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ತರ್ಕದ ಮಾತಿಗೆ ತದ್ವಿರುದ್ಧವಾಗಿ ಬೆಳೆದ ರಾಮೋಜಿ ರಾವ್ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು.
ರಾಮೋಜಿ ರಾವ್ ನಿರ್ಮಿಸಿದ ಅಂಗಸಂಸ್ಥೆಗಳು:
ರಾಮೋಜಿ ಗ್ರೂಪ್ ಸಂಸ್ಥೆ ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ಮಾರ್ಗದರ್ಶಿ ಫೈನಾನ್ಷಿಯಲ್ ಸರ್ವಿಸಸ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಶಾಪಿಂಗ್ ಮಾಲ್ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಸಾವಿರಾರು ಜನರಿಗೆ ಉದ್ಯೋಗತರಾದರು. ಜನರ ಮನಸ್ಥಿತಿಗೆ ಬೇಗನೆ ಹೊಂದಿಕೊಳ್ಳುತ್ತಿದ್ದ ರಾಮೋಜಿ ರಾವ್ ಈಟಿವಿ ಎಂಬ ವಾಹಿನಿಯನ್ನು ಆರಂಭಿಸಿದ ತಕ್ಷಣ ಜನರನ್ನು ತಲುಪಿ “ನ್ಯೂಸ್ ಟೈಮ್” ಆರಂಭಿಸಿ, ಜನರಿಗೆ ಮನರಂಜನೆಯ ಜೊತೆಗೆ ಸುದ್ದಿ ವಾಹಿಸಿ ಆರಂಭಿಸಿ ಜನಾನುರಾದರು. ಈಟಿವಿ ವಾಹಿನಿಯಲ್ಲಿ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ, ಅಡುಗೆ ಕಾರ್ಯಕ್ರಮ, ಚಿಣ್ಣರಿಗಾಗಿ ವಿಶೇಷ ಶೋಗಳ ಜೊತೆಗೆ ಜನರನ್ನು ಮೆಚ್ಚಿಸಿದರು.
“ಈಟಿವಿ ಭಾರತ” ಎಂಬ ಬ್ರಾಂಡ್:
ʻಈಟಿವಿ ಭಾರತʼ ಎಂಬ ಡಿಜಿಟಲ್ ವಾಹಿನಿ ಆರಂಭಿಸಿ ಮಾಧ್ಯಮವನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದ ರಾವ್ ʻಈಟಿವಿ ಭಾರತʼ 13 ಭಾಷೆಗಳಲ್ಲಿ ಜನರಿಗೆ ಸುದ್ದಿ ತಲುಪುತ್ತಿರುವುದು ಹೆಮ್ಮೆಯೇ ಸೈ. ತಲೆಮಾರುಗಳು ಬದಲಾದಂತೆ ಆ ಸಮಯಕ್ಕೆ ಸರಿಯಾಗಿ ರಾಮೋಜಿ ರಾವ್ ತಮ್ಮ ಉದ್ಯಮವನ್ನು ಉನ್ನತಿಕರೀಸುತ್ತಿದ್ದದು ವಿಶೇಷ ಇದೇ ಅವರ ಯಶಸ್ಸಿಗೆ ಮೂಲ ಗುಟ್ಟು ಎಂಬುದಾಗಿ ತಿಳಿಯಬಹುದು.
ದಶಕಗಳ ಕಾಲ ಎಲ್ಲಾ ವಿಭಾಗದಲ್ಲಿ ಅವಿರತವಾಗಿ ಶ್ರಮಿಸಿದ ಅಕ್ಷರ ಯೋಧ ರೈತನ ಮಗ ರಾಮೋಜಿ ರಾವ್ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿ, ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನ ದಿಗ್ಗಜರಾಗಿ ಹೊರಹೊಮ್ಮಿದರು. ಮಾಧ್ಯಮ ಕ್ಷೇತ್ರದಲ್ಲಿ ಇವರು ನೀಡಿದ ಅಪಾರ ಕೊಡುಗೆ ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ ಮಾರ್ಗದರ್ಶಿ ಬದುಕು ಸಾಗಿಸಿದ ಉದ್ಯಮಿ ರಾಮೋಜಿ ರಾವ್ ಈ ದಿನ ನಿಧನರಾದರು