ಗುಲಾಬಿ ಅಜ್ಜಿಯ ಸೋರುವ ಮನೆಯ ಸೂರು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮನ ಮಿಡಿದು ಸ್ಪಂದನೆ ನೀಡಿದ ಶಾಸಕ ಉಮಾನಾಥ್ ಕೋಟ್ಯಾನ್.
ವೈರಲ್ ಆದ ವಿಡಿಯೋದ :
ಮೂಡುಬಿದಿರೆ ವಿಧಾನಸಭಾ ವ್ಯಾಪ್ತಿಯ ಬಜಪೆಯಲ್ಲಿ ವಾಸ್ತವಿರುವ ಗುಲಾಬಿ ಅಜ್ಜಿ ಮತ್ತು ಮನೆಯ ಸ್ಥಿತಿಗತಿಗಳ ಬಗ್ಗೆ 11/06/2024 ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು, ಹಲವಾರು ಜನ ವಿಡಿಯೋವನ್ನು ಸೇರ್ ಮಾಡಿದ್ದರು ವಿಡಿಯೋ ಮಾಡಿದ ಯುವಕ ಅಜ್ಜಿಯ ಮನೆಯ ಪರಿಸ್ಥಿತಿ ಮಳೆಯಿಂದ ಮನೆ ಸೋರುವ ದೃಶ್ಯವನ್ನು ತೋರಿಸಿ ಸಹಾಯ ಮಾಡುವಂತೆ ವಿನಂತಿಸಿದ್ದರು. ಜೊತೆಗೆ ಅಜ್ಜಿ ನಡೆದಾಡುವ ಪರಿಸ್ಥಿತಿ ಇಲ್ಲದೇ ಮಲಗಿದಲ್ಲೇ ಊಟ ಮಾಡುವ ಮನಕಲಕುವ ದೃಶ್ಯಗಳು ಕಟುಕನಿಗೆ ಕಣ್ಣೀರು ತರಿಸುವಂತಿತ್ತು ಮನೆಗೆ ಟಾರ್ಪಲ್ ಹಾಕಿ ಕೊಡುವ ಭರವಸೆಯನ್ನು ಯುವಕ ತಿಳಿಸಿದ್ದ ಅದರಂತೆ ತಕ್ಷಣ ಇದನ್ನು ಕಂಡ ರಾಜೇಶ್ ಅಮೀನ್ ಲೋಕೇಶ್ ಪೂಜಾರಿ ವಿಜಯಕುಮಾರ್ ಕೆಂಜಾರು ಕಾನ, ಗಣೇಶ್ ಪೂಜಾರಿ, ಶಿವರಾಮ ಪೂಜಾರಿ ಇವರುಗಳು ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಇವರ ಗಮನಕ್ಕೆ ತಂದು ಮರುದಿನ ಅಂದರೆ ಇಂದು ಬೆಳಿಗ್ಗೆ ಸ್ಥಳಕ್ಕೆ ಮುಲ್ಕಿ ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಸ್ಥಳಕ್ಕೆ ಧಾವಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಅಜ್ಜಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಹೋಗಿ ದಾಖಲು ಮಾಡಿ ಸರಿಯಾದ ಚಿಕಿತ್ಸೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವೈದ್ಯರುಗಳಿಗೆ ಸೂಚನೆ ನೀಡಿದ್ದರೆ ಒರ್ವ ಜನಪ್ರತಿನಿಧಿಯಾಗಿ ಜನರ ಕಷ್ಟವನ್ನು ಅರಿಯಬೇಕಾಗಿರುವುದು ಅವರ ಕರ್ತವ್ಯ ಈ ಕೆಲಸದ ಮೂಲಕ ಶಾಸಕರ ಕಾರ್ಯವೈಖರಿ ಶ್ಲಾಘನೀಯ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದಾರೆ.
ಒರ್ವ ಜನಪ್ರತಿನಿಧಿಯಾಗಿ ಈ ಮೂಲಕ ಸಾಮಾಜಿಕಜಾಲತಾಣವು ಒಳ್ಳೆಯ ವಿಚಾರಕ್ಕೂ ಬಳಕೆಯಾಗುತ್ತದೆ ಎಂಬುದಕ್ಕೆ ಈ ಅಜ್ಜಿಯ ವರದಿಯೇ ಸಾಕ್ಷಿ ಈ ಸಂಧರ್ಭದಲ್ಲಿ ಬಜಪೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಬಜಪೆ ಪಟ್ಟಣ ಪಂಚಾಯತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.