ಕೋಲಾರ: ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ನಿಮಿತ್ತ ಇಂದು (ಜೂನ್ 27) ಕೋಲಾರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ವಿವಿಧ ವಾದ್ಯಗಳೊಂದಿಗೆ ಕೆಂಪೇಗೌಡರ ಪಲ್ಲಕ್ಕಿಯನ್ನು ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗಿದೆ.
ಈ ವೇಳೆ ಕೋಲಾರ ನಗರದ ಅರಹಳ್ಳಿ ಗೇಟಿ ಬಳಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಮಸೀದಿ ಎದುರು ಡಿಜೆ ಸೌಂಡ್ ಹಾಕಿಕೊಂಡು ಹೋಗಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕೋಲಾರ ನಗರದ ಅರಹಳ್ಳಿ ಗೇಟಿ ಬಳಿಯ ಮಸೀದಿ ಮುಂದೆ ಡಿಜೆ ಸೌಂಡ್ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ಮತ್ತು ಡಿಜೆ ತಡೆದು ಗಲಾಟೆ ಮಾಡಲಾಗಿದೆ. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇದು ಕೈ ಮೀರಿ ಹೋಗುವ ಮೊದಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಗುಂಪುಗಳ ಜನರನ್ನು ಮನವೊಲಿಸಿದ್ದಾರೆ. ಈ ಗಲಾಟೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸಿದ್ದರಿಂದ ಎಲ್ಲವೂ ಬಗೆಹರಿದಿದೆ.