ಪುತ್ತೂರು : ಪಶುಸಂಗೋಪನೆ ಇಲಾಖೆಯ ಜಾನುವಾರು ಸಂವರ್ಧನಾ ಕೇಂದ್ರ ಕ್ಯೊಲ ಇಲ್ಲಿ ಅಧೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪಾ ಗೌಡ ಕೆ.ಇ. ಕೆಮ್ಮಾಯಿ ಅವರು ಉಪನಿರ್ದೇಶಕರ ಕಛೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಾರವಾರ ಜಿಲ್ಲೆಗೆ ಮುಂಬಡ್ತಿಗೊಂಡು ಸಹಾಯಕ ಆಡಳಿತ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಈ ಮೊದಲು ಇವರು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಕಛೇರಿ ಮಂಗಳೂರಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಪದೋನ್ನತಿಗೊಂಡು ಜಾನುವಾರು ಸಂವರ್ಧನಾ ಹಾಗೂ ತರಬೇತಿ ಕೇಂದ್ರ ಕ್ಯೊಲದಲ್ಲಿ ಕಳೆದ 9 ವರ್ಷದಿಂದ ಅಧೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಸಹಾಯಕ ಆಡಳಿತ ಅಧಿಕಾರಿಯಾಗಿ ಮುಂಬಡ್ತಿಗೊಂಡು ಕಾರವಾರ ಜಿಲ್ಲೆಗೆ ವರ್ಗಾವಣೆಯಾಗಿರುತ್ತಾರೆ.