ಪುತ್ತೂರು: ಚೆಲ್ಯಡ್ಕ ಸೇತುವೆ ಸಂಚಾರಕ್ಕೆ ನಿಷೇಧ ವಿವಿಧ ಸಂಘ ಸಂಸ್ಥೆಗಳು ಸೇರಿ ಮಂಗಳವಾರ ಬೃಹತ್ ರಸ್ತೆ ತಡೆ ಪ್ರತಿಭಟನೆ ನಿರ್ಧಾರ
ಪುತ್ತೂರು ದೇವಸ್ಯ ಚೆಲ್ಯಡ್ಕ ಪಾಣಾಜೆ ಪೆರ್ಲ ಸಾಗುವವರು ಹೆಸರುವಾಸಿ ಚೆಲ್ಯಡ್ಕ ಮುಳುಗು ಸೇತುವೆ ಮೇಲೆ ಹೋಗಬೇಕಾಗಿದ್ದು ಈ ಸೇತುವೆ ತೀರಾ ಶಿಥಿಲವಾಗಿದ್ದು ಇದರಲ್ಲಿ ಘನ ವಾಹನ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದು ಹಗಲಿನಲ್ಲಿ ಸಣ್ಣ ವಾಹನ ಸಂಚಾರಕ್ಕೆ ಅವಕಾಶ ನೀಡಿತ್ತು. ಆದರೆ ದಿನನಿತ್ಯದ ಕೆಲಸಕ್ಕೆ ತೆರಳುವವರಿಗೆ, ಶಾಲಾ ಕಾಲೇಜು ತೆರಳುವ ಮಕ್ಕಳಿಗೆ ಈ ಸಂಚಾರ ನಿರ್ಭಂದ ಹೇರಿದ ಪರಿಣಾಮ ಬಸ್ ವ್ಯವಸ್ಥೆ ಇಲ್ಲದಾಗಿದೆ.ಮುಖ್ಯವಾಗಿ
ಗುಮ್ಮಟಗದ್ದೆ, ಅಜ್ಜಿಕಲ್ಲು, ಕಲೆಂಜಿಲ, ಮುಂಡೋವುಮೂಳೆ, ಬೈರೋಡಿ ಕಾಪಿಕಾಡ್, ಕೇರಿ ಭಾಗದ ಮಕ್ಕಳು ಬೆಟ್ಟoಪಾಡಿ ಉಪ್ಪಳಿಗೆ ಹೈ ಸ್ಕೂಲ್ ಕಾಲೇಜ್ ಅವಲಂಬಿಸಿದ್ದು ಆ ಮಾರ್ಗದ ಮೂಲಕವೇ ತೆರಳಬೇಕಾದ ಅನಿವಾರ್ಯತೆಯಿದೆ.
ಆದರೆ ಸೇತುವೆ ಕಾಮಗಾರಿ ಬಗ್ಗೆ ಅರಿವಿದ್ದ ಸಾರ್ವಜನಿಕರು ಪರ್ಯಾಯವಾಗಿ ಮಾರ್ಗ ಬದಲಿಸಿ ಕೊಡುವಂತೆ ಹಲವು ಅರ್ಜಿಗಳನ್ನು ಮನವಿಗಳನ್ನು ನೀಡಿದ್ದು ಯಾವುದೇ ವ್ಯವಸ್ಥೆ ಆಗದಿರುವ ಕಾರಣ ಸೋಮವಾರ ಸಂಜೆಯ ತನಕ ಪರ್ಯಾಯ ಮಾರ್ಗದ ವ್ಯವಸ್ಥೆಗೆ ಸ್ಥಳೀಯರು ಕಾಯುತ್ತೇವೆ ಒಂದೊಮ್ಮೆ ಆದು ಆಗದಿದ್ದಲ್ಲಿ ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಂಗಳವಾರ ಅಂದರೆ ಜುಲೈ 9 ರ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಿದ್ದಾರೆ ಎಂದು ತಿಳಿಸಿದು ಬಂದಿದೆ.

ಹಲವು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತಿರುವ ಸೇತುವೆ ಪ್ರತಿವರ್ಷ ಮಳೆಗಾಲ ಬಂತೆಂದರೇ ಚೆಲ್ಯಡ್ಕ ಮುಳುಗು ಸೇತುವೆ ವರದಿ ಸುದ್ದಿ ಜನಜನಿತವಾಗಿದ್ದು ಶಕುಂತಲಾ ಶೆಟ್ಟಿ ಶಾಸಕರಾಗಿದ್ದ ಸಂಧರ್ಭದಲ್ಲಿ ಕಾಮಗಾರಿ ಕಾರ್ಯಕ್ಕೆ ಮೊದಲ ಮುಹೂರ್ತವಾಗಿದ್ದು ಬೇಕಾದ ಎಲ್ಲಾ ವ್ಯವಸ್ಥೆ ನಡೆದಿತ್ತು. ನಂತರದ ಶಾಸಕರಾದ ಸಂಜೀವ ಮಠಂದೂರು ಕೊನೆಯ ಘಳಿಗೆಯಲ್ಲಿ ನಕ್ಷೆ ರಚಿಸಿದ್ದು, ಪ್ರಸ್ತುತ ಅಶೋಕ್ ರೈ ಶಾಸಕರ ನೇತೃತ್ವದಲ್ಲಿ ಅಂತಿಮ ಹಂತದ ಟೆಂಡರ್ ಪ್ರಕ್ರಿಯೆ ನಡೆದಿದ್ದು ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಕಾರಣ ಕಾಮಗಾರಿ ನಿಂತಿದ್ದು ಮಳೆಗಾಲ ಮುಗಿದ ತಕ್ಷಣ ಕೆಲಸ ಆರಂಬಿಸಲಿದ್ದು ಕಾಮಗಾರಿ ಮೂಲಕ ಪೂರ್ಣ ಪ್ರಮಾಣದ ಅಂತ್ಯ ಸೇತುವೆಗೆ ನೀಡಲಿದ್ದು ಅಲ್ಲಿಯ ತನಕ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಆಗಬೇಕಾಗಿದೆ.
























