ಪುತ್ತೂರು: ವೇಗವಾಗಿ ಬೆಳೆಯುತ್ತಿರುವ ಪುತ್ತೂರಿನ ಹಾಸು ಪಾಸಿನ ಪೇಟೆಗಳಲ್ಲಿ ಕುಂಬ್ರ ಜಂಕ್ಷನ್ ಒಂದು.. ದಿನ ನಿತ್ಯದ ಜನರ ಅವಶ್ಯಕತೆಗಳಲ್ಲಿ ಬೇಕರಿ ತಿಂಡಿ ತಿನಿಸುಗಳು ಇಂದು ಜನರಿಗೆ ,ಅದರಲ್ಲೂ ಮಕ್ಕಳಿಗೆ ಬೇಕೇ ಬೇಕು. ಇಂತಾ ಒಂದು ಜನರ ಅವಶ್ಯಕತೆ ಮನಗಂಡು ಪುತ್ತೂರು.ಸುಳ್ಯ ಎಡ ಮಂಗಲ ಇಂತಾ ಹಲವು ಕಡೆ ಸಂಸ್ಥೆಯನ್ನು ಹೊಂದಿರುವ “ಪ್ರೆಂಡ್ಸ್ ಬೇಕ್ ” ಸಂಸ್ಥೆಯು ಇದರ ಹೊಸ ಸಂಸ್ಥೆಯನ್ನು ಕುಂಬ್ರ ಜಂಕ್ಷನ್ ನಲ್ಲಿ ತೆರೆಯಲು ಸಜ್ಜಾಗಿದೆ. ಈ ಒಂದು ಸಂಸ್ಥೆ ಇಲ್ಲಿ ಶುಭಾರಂಭ ಆಗುವುದು ಇಲ್ಲಿನ ಜನರಿಗೂ ಒಂದು ಸಂತಸದ ವಿಷಯವಾಗಿದೆ.
ಪುತ್ತೂರಿನ ಪ್ರೆಂಡ್ಸ್ ಬೇಕ್ ಇದರ ಸಹ ಸಂಸ್ಥೆಯಾದ ” ಪ್ರೆಂಡ್ಸ್ ಬೇಕ್” ಕುಂಬ್ರ ಜಂಕ್ಷನ್ ನಲ್ಲಿ 11.07.2024 ನೇ ಗುರುವಾರ ಶುಭಾರಂಭ ಗೊಳ್ಳಲಿದೆ.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಪುತ್ತೂರಿನ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಇವರು ನಡೆಸಿ ಕೊಡಲಿದ್ದಾರೆ.ಹಾಗೂ ದೀಪ ಪ್ರಜ್ವಲನೆಯನ್ನು ಶ್ರೀ ಹರ್ಷ ಕುಮಾರ್ ರೈ ಮಾಡವು ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಶ್ರೀಮತಿ ಶಕುಂತಲಾ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ದುರ್ಗಾ ಪ್ರಸಾದ್ ರೈ ಕುಂಬ್ರ, ಜಯಂತ್ ನಡುಬೈಲು, ಸುಂದರ್ ರೈ ಮಂದಾರ, ನಿತೇಶ್ ಕುಮಾರ್ ಶಾಂತಿವನ, ರಫೀಕ್ ಅಲರಾಯ, ಹರೀಶ್ ಕುಮಾರ್ ನಿರಾಲ, ಬಾಲಕೃಷ್ಣ ಪೂಜಾರಿ, ಗಣೇಶ್ ಪಂಚಮಿ, ತ್ರಿವೇಣಿ ಪಲ್ಲತ್ತಾರು, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಕರುಣಾಕರ ಗೌಡ ಎಲಿಯ, ಮೆಲ್ವಿನ್ ಮೊಂತೊರೋ, ಸಂದೀಪ್ ರೈ, ಶ್ರೀ ಶೇಖರ ಪೂಜಾರಿ ಮಾಲಕರು ಪ್ರೆಡ್ಸ್ ಬೇಕ್ ಪುತ್ತೂರು,
ಮೋಹನ್ ಡಿ, ಭಾಸ್ಕರ್ ರೈ, ಕುಮಾರನಾಥ ಎಸ್ ,ಲೀಲಾವತಿ, ಲೋಹಿತ್ ಸಾಲಿಯಾನ್ ಇವರುಗಳು ಈ ಒಂದು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ. ಜೊತೆಗೆ ಕಾರ್ಯಕ್ರಮದ ನಿರೂಪಣೆ ಯನ್ನು ವಿ.ಜೆ ವಿಖ್ಯಾತ್ ಸುಳ್ಯ ಇವರು ನಡೆಸಿ ಕೊಡಲಿದ್ದಾರೆ.
ಈ ಒಂದು ಶುಭ ಸಂದರ್ಭದಲ್ಲಿ ಶ್ರೀ ರಾಗ್ ಕ್ರಿಯೇಷನ್ಸ್ ನವರಿಂದ “ಉದ್ದಡ್ಕ ಕಲ್ಲುರ್ಟಿ” ಎಂಬ ತುಳು ಭಕ್ತಿಗೀತೆ ಲೋಕಾರ್ಪಣೆಗೊಳ್ಳಲಿದೆ .ಈ ಒಂದು ಕಾರ್ಯಕ್ರಮಕ್ಕೆ ತಮ್ಮನ್ನೆಲ್ಲಾ ಪ್ರೀತಿಪೂರ್ವಕವಾಗಿ ಸಂಸ್ಥೆಯ ಮಾಲಕರಾದ ಶ್ರೀ ಕರುಣಾಕರ ಸಾಲಿಯಾನ್ ಮತ್ತು ಸಹೋದರರು ಹಾಗೂ ಶ್ರೀಮತಿ ಗೀತಾ ಮತ್ತು ಶ್ರೀ ಶೇಖರ ಪೂಜಾರಿ ವಿಟ್ಲ, ಬೇಬಿ ಹಿಮಾನ್ಯ ಇವರು ನಿಮ್ಮನ್ನು ಆಮಂತ್ರಿಸುತ್ತಿದ್ದಾರೆ.