ಪುತ್ತೂರು: ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ವರ್ಷಕ್ಕೆ 2-3 ಸಲ ತಮ್ಮ ಕೋವಿಗಳನ್ನು ರೈತರೆಲ್ಲರೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದರಿಂದ ತಮ್ಮ ಕೃಷಿ ಜಮೀನಿಗೆ ದಾಳಿ ಮಾಡುವ ಕಾಡು ಪ್ರಾಣಿಗಳನ್ನು ಕಳ್ಳರನ್ನು ಓಡಿಸುವುದು ತುಂಬಾ ಕಷ್ಟಕರವಾಗಿರುವುದರಿಂದ ಕೇರಳ ಸರಕಾರದ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ವಿನಾಯಿತಿ ನೀಡಬೇಕೆಂದು ನಾವು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, ಆದರೆ ಜಿಲ್ಲಾಧಿಕಾರಿಯವರು ಇದಕ್ಕೆ ಯಾವುದೇ ವಿನಾಯಿತಿ ನೀಡದೆ ರೈತರ ಕೋವಿಯನ್ನು ಏಪ್ರಿಲ್ 1 ರ ನಂತರ ಡಿಪಾಸಿಟ್ ಮಾಡುವುದು ಎಂದಿದ್ದರೂ ಪೊಲೀಸ್ ಇಲಾಖೆಯಿಂದ ಮಾರ್ಚ್ 20 ರ ಒಳಗೆ ಕೋವಿ ದೀಪಾಸಿಟ್ ಮಾಡಿಸಿರುತ್ತಾರೆ
ರೈತರ ಕೋವಿ ಡಿಪಾಸಿಟ್ ಇಡುವುದರಿಂದ ರೈತರಿಗೆ ಸಮಸ್ಯೆಯಗುತ್ತಿರುವ ಬಗ್ಗೆ ರೈತ ಸಂಘ ವತಿಯಿಂದ ಈಗಾಗಲೇ ಆಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಿದರೂ ಇನ್ನು ಸರಕಾರ ಎಚ್ಚತ್ತು ಕೊಂಡಂತೆ ಕಾಣುತ್ತಿಲ್ಲ,
ಕೋವಿ ಡಿಪಾಸಿಟ್ ನ ಪರಿಣಾಮವಾಗಿ ಪುತ್ತೂರು ತಾಲೂಕಿನ ಸವನೂರು ಗ್ರಾಮದ ಅಗರಿ ಎಂಬಲ್ಲಿ ನಿನ್ನೆ ಮದ್ಯಾನ್ಹ ರತ್ನಾಕರ ಸುವರ್ಣ ಎಂಬವರ ಕೃಷಿ ತೋಟದಲ್ಲಿ ಕಾಡು ಹಂದಿಗಳು ದಾಳಿ ಮಾಡಿದಾಗ ಇದನ್ನು ಓಡಿಸಲು ಹೋಗಿ ರತ್ನಾಕರ ಸುವರ್ಣ ರವರಿಗೆ ತಿವಿದು ತೀವ್ರ ಸ್ವರೂಪದ ಗಾಯ ಗೊಳಿಸಿದ್ದು, ಇವರನ್ನು ಈಗಾಗಲೇ ಪುತ್ತೂರಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಾಲಿಸಲಾಗಿದೆ.
ದಾಳಿಯದ ಸಂದರ್ಭ ಜಿಲ್ಲಾಧಿಕಾರಿಗೆ ಕರೆ ಮಾಡಿದಾಗ ಅಲ್ಲಿನ ಪಿ.ಎ ನಾನೆ ಜಿಲ್ಲಾಧಿಕಾರಿ ಎಂದು ವರ್ತಿಸಿ ಉದ್ದತತನದಿಂದ ವರ್ತಿಸಿದ್ದಾರೆ
ರೈತರ ಕಷ್ಟಕ್ಕೆ ಸ್ಪಂದಿಸದ ಆಡಳಿತ ಇದ್ದು ನಿಸಪ್ರಯೋಜಕ, ಪೊಲೀಸ್ ಇಲಾಖೆ ಕೂಡ ಇದೆ ರೀತಿ ಬೇಜವಾಬ್ದಾರಿಯುತಾವಾಗಿ ವರ್ತಿಸುತ್ತದೆ. ಈ ಎಲ್ಲಾ ಅನಾಹುತಕ್ಕೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆಡಳಿತ ಸಂಪೂರ್ಣ ಹೊಣೆಯಾಗಿದ್ದು, ರತ್ನಾಕರ ಸುವರ್ಣ ರವರ ಸಂಪೂರ್ಣ ಆಸ್ಪತ್ರೆಯ ಖರ್ಚು ವೆಚ್ಚ ವನ್ನು ಭರಿಸಬೇಕು, ರೈತರಿಗೆ ಮಾರಕವಾದ ಈ ಕಾನೂನು ತೆಗೆದುಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷರಾದ ಬಿ ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದರು.