ಬಂಟ್ವಾಳದ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ, ಎಸ್.ಡಿ.ಪಿ.ಐ ಜೊತೆ ಮೈತ್ರಿ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಈ ಬಗ್ಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಎಸ್.ಡಿ.ಪಿ.ಐ ಮೈತ್ರಿ ಮಾಡಿ ಅಧಿಕಾರ ಹಿಡಿಯುವ ಮೂಲಕ ಎಸ್.ಡಿ.ಪಿ.ಐ ಇಲ್ಲಿಯ ತನಕ ತೆರೆಮರೆಯಲ್ಲಿ ಕಾಂಗ್ರೆಸ್ ಜೊತೆ ಬೆಳೆಸಿದ ಸಖ್ಯ ಇಂದು ಹೊರಜಗತ್ತಿಗೆ ಸ್ಪಷ್ಟವಾಗಿ ಕಾಣುತ್ತಿದೆ.
ಬಂಟ್ವಾಳ ಪುರಸಭೆಯ ಫಲಿತಾಂಶ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನೈಜ ಮುಖವಾಡವನ್ನು ಕಳಚಿದೆ.
ಕಾಂಗ್ರೆಸ್ಸಿಗೆ ಜನರು ಕೊಡುವ ಒಂದೊಂದು ಮತವೂ ಸ್ಥಳೀಯಾಡಳಿತದಿಂದ ರಾಷ್ಟ್ರಮಟ್ಟದ ತನಕ ದೇಶದ್ರೋಹಿಗಳಿಗೆ ಅಧಿಕಾರ ಹಿಡಿಯಲು ನೆರವಾಗುತ್ತದೆ ಎನ್ನುವುದಕ್ಕೆ ಬಂಟ್ವಾಳ ಪುರಸಭೆ ಸಾಕ್ಷಿ ಎಂದು ಹೇಳಿದ್ದಾರೆ.



                                









			










