ಮಂಡ್ಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಎಮ್ಎಲ್ಸಿ ಸಿಪಿ ಯೋಗೇಶ್ವರ್, ‘ ಚುನಾವಣೆ ಮುಂದಿನ ತಿಂಗಳು 10 ರಂದು ಘೋಷಣೆ ಆಗಬಹುದು. ಎರಡೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕಿರುತ್ತದೆ. ಬಿಜೆಪಿ , ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ವರಿಷ್ಠರ ತೀರ್ಮಾನ ಕಾದು ನೋಡೋಣ ಎಂದರು.ಮಂಡ್ಯ, ಸೆ.29: ಮೈತ್ರಿ ಟಿಕೆಟ್ ಕೈ ತಪ್ಪಿದರೆ ಕಾಂಗ್ರೆಸ್ ಪಕ್ಷ ಸೇರುವ ವಿಚಾರವಾಗಿ ಅಡ್ಡ ಗೋಡೆಮೇಲೆ ದೀಪ ಇಟ್ಟ ರೀತಿಯಲ್ಲಿ ಮಾಜಿ ಎಮ್ಎಲ್ಸಿ ಸಿಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಆ ಬಗ್ಗೆ ನಾನು ಯೋಚನೆ ಮಾಡಿಲ್ಲ. ಈ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಯಾರು ನನ್ನನ್ನು ಭೇಟಿ ಮಾಡಿಲ್ಲ. ಸ್ಪರ್ಧೆ ಮಾಡುವಂತೆ ಒತ್ತಡವಿದೆ, ಮುಂದೆ ನೋಡ್ತಿನಿ. ರಾಜಕಾರಣದಲ್ಲಿ ನಾವು ನೀವು ಯಾರು ಊಹೇ ಮಾಡದ ಘಟನೆಗಳು ನಡೆಯುತ್ತಿವೆ. ಪಕ್ಷಾಂತರ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿದರು ಬಳಿಕ ಚನ್ನಪಟ್ಟಣ ಉಪಚುನಾವಣಾ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಚುನಾವಣೆ ಮುಂದಿನ ತಿಂಗಳು 10 ರಂದು ಘೋಷಣೆ ಆಗಬಹುದು. ಎರಡೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕಿರುತ್ತದೆ. ಬಿಜೆಪಿ , ಜೆಡಿಎಸ್ ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ವರಿಷ್ಠರ ತೀರ್ಮಾನ ಕಾದು ಇನ್ನು ಚನ್ನಪಟ್ಟಣಕ್ಕೆ ಡಿಸಿಎಂ ಡಿಕೆಶಿ ಪದೇ ಪದೇ ಭೇಟಿ ಕುರಿತು ಪ್ರತಿಕ್ರಿಯೆ ನೀಡಿ, ಉಪ ಚುನಾವಣೆಗಳು ಬಂದ ಸಂದರ್ಭದಲ್ಲಿ ಭೇಟಿ ನೀಡೋದು ಸಹಜ. ಉಪಚುನಾವಣೆ ಬಂದಾಗ ಘೋಷಣೆ ಮಾಡುವುದು ಸಾಮಾನ್ಯ. ಬಜೆಟ್ಗೂ ಉಪ ಚುನಾವಣೆ ಘೋಷಣೆಗೂ ವ್ಯತ್ಯಾಸ ಇದೆ. ಇಂತಹ ಕಾರ್ಯಕ್ರಮಗಳಿಗೆ ಅಷ್ಟೊಂದು ಮಹತ್ವ ಇಲ್ಲ ಎಂದು ತಿರುಗೇಟು ನೀಡಿದರು.