• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು 90ನೇ ವರ್ಷದ ಶಾರದೋತ್ಸವ ಅಕ್ಷರ ಯಜ್ಞ ಸೇವೆ ವಿಶೇಷ – ಸೀತಾರಾಮ ರೈ ಕೆದಂಬಾಡಿಗುತ್ತು

ಪುತ್ತೂರು 90ನೇ ವರ್ಷದ ಶಾರದೋತ್ಸವ ಅಕ್ಷರ ಯಜ್ಞ ಸೇವೆ ವಿಶೇಷ – ಸೀತಾರಾಮ ರೈ ಕೆದಂಬಾಡಿಗುತ್ತು

October 1, 2024
ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ  ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

October 15, 2025
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆ

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆ

October 15, 2025
ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್!  ಕಾಮುಕರು ಲಾಕ್

ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್! ಕಾಮುಕರು ಲಾಕ್

October 15, 2025
ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

October 15, 2025
ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

October 14, 2025
ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

October 14, 2025
ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

October 14, 2025
ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

October 14, 2025
ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ  ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

October 14, 2025
ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

October 14, 2025
ಅಶೋಕ‌ ಜನಮನ‌2025 ಯಶಸ್ವಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಶ್ರೀ‌ಮಹಾಲಿಂಗೇಶ್ಚರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಅಶೋಕ‌ ಜನಮನ‌2025 ಯಶಸ್ವಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಶ್ರೀ‌ಮಹಾಲಿಂಗೇಶ್ಚರ ದೇವಸ್ಥಾನದಲ್ಲಿ ವಿಶೇಷ ಪೂಜೆ

October 13, 2025
ಪದ್ಮುಂಜದಲ್ಲಿ ನೂತನವಾಗಿ ಶುಭಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

ಪದ್ಮುಂಜದಲ್ಲಿ ನೂತನವಾಗಿ ಶುಭಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

October 13, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, October 16, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ  ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

    ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

    ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್!  ಕಾಮುಕರು ಲಾಕ್

    ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್! ಕಾಮುಕರು ಲಾಕ್

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

    ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

    ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

    ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

    ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

    ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

    ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

    ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

    ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

    ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ  ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

    ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

    ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

    ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಜಿಲ್ಲೆ

ಪುತ್ತೂರು 90ನೇ ವರ್ಷದ ಶಾರದೋತ್ಸವ ಅಕ್ಷರ ಯಜ್ಞ ಸೇವೆ ವಿಶೇಷ – ಸೀತಾರಾಮ ರೈ ಕೆದಂಬಾಡಿಗುತ್ತು

ಇಲ್ಲಿ ನಾನಾ ಪವಾಡಗಳು, ವಿವಿಧ ಸಾಂಸ್ಕೃತಿಕ ಪ್ರದರ್ಶನ, ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ, ಶಾರದಾ ಭಜನಾ ಮಂದಿರಕ್ಕೆ ನೂರಾರು ವರ್ಷಗಳ ಇತಿಹಾಸ

by ಪ್ರಜಾಧ್ವನಿ ನ್ಯೂಸ್
October 1, 2024
in ಜಿಲ್ಲೆ, ದಕ್ಷಿಣ ಕನ್ನಡ, ಧಾರ್ಮಿಕ, ಪುತ್ತೂರು, ಪ್ರಾದೇಶಿಕ, ಸಾಂಸ್ಕೃತಿಕ
0
ಪುತ್ತೂರು 90ನೇ ವರ್ಷದ ಶಾರದೋತ್ಸವ ಅಕ್ಷರ ಯಜ್ಞ ಸೇವೆ ವಿಶೇಷ – ಸೀತಾರಾಮ ರೈ ಕೆದಂಬಾಡಿಗುತ್ತು
22
SHARES
62
VIEWS
ShareShareShare

ಪುತ್ತೂರು: ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ವೈಭವದಿಂದ ಕೂಡಿರುವ ನವರಾತ್ರಿ ಉತ್ಸವಗಳು ಪುತ್ತೂರಿನಲ್ಲಿ ಗತಕಾಲದಲ್ಲೇ ನಡೆಯುತ್ತಿದ್ದು, ಕಾಲಾಂತರದಲ್ಲಿ ವೈಭವ ಕಳೆದುಕೊಂಡಾಗ ಕಳೆದ ವರ್ಷದಿಂದ ಮತ್ತೆ ಗತಕಾಲದ ವೈಭವವನ್ನು ಮರುಸೃಷ್ಟಿಸಿ ಇದೀಗ 90ನೇ ವರ್ಷದ ನವರಾತ್ರಿ ಉತ್ಸವ ಮತ್ತು ಪುತ್ತೂರು ಶಾರದೋತ್ಸವವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.3 ರಿಂದ 12ರ ತನಕ ವೈಭವದಿಂದ ಜರುಗಲಿದೆ.

ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.11ಕ್ಕೆ ಧಾರ್ಮಿಕ ಸಭೆಯ ಬಳಿಕ ಅ.12ರಂದು ವೇದಘೋಷ, ಚೆಂಡೆಮೇಳ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಶೋಭಾಯಾತ್ರೆಯ ಮೂಲಕ ಸಂಪನ್ನಗೊಳ್ಳಲಿದೆ.

ಶ್ರೀ ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಹಲವಾರು ಪವಾಡಗಳನ್ನು ಕಂಡಿರುವ ಪುತ್ತೂರು ಶಾರದಾ ಭಜನಾ ಮಂದಿರ ಕಳೆದ ವರ್ಷ ಗತಕಾಲದ ವೈಭವವನ್ನು ಮರುಕಳಿಸುವ ಜೊತೆಗೆ ಬಹಳ ವಿಜೃಂಭಣೆಯಿಂದ ಶಾರದೋತ್ಸವ ನಡೆದಿದೆ.ಈ ಭಾರಿ ಶಾರದೋತ್ಸವಕ್ಕೆ ಮೂರು ಪಟ್ಟು ಹೆಚ್ಚಿನ ಮೆರುಗಿನಿಂದ ವಿಜೃಂಭವಿಸಲಿದೆ ಎಂದು ಅವರು ಹೇಳಿದರು.

ಅ.3ರಂದು ನವರಾತ್ರಿ ಪೂಜೆ ಆರಂಭಗೊಳ್ಳಲಿದೆ. ಅಂದು ಅಕ್ಷರಯಜ್ಞ ಸೇವೆಗಾಗಿ ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಅ.9 ರಂಂದು ಬೆಳಿಗ್ಗೆ ಗಂಟೆ 10ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ’ಅಕ್ಷರಯಜ್ಞ’ ಸರಸ್ವತೀ ಪೂಜೆ ನಡೆಯಲಿದೆ. ಅ.10ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ.

ಅ.12ರಂದು ಬೆಳಿಗ್ಗೆ ಗಂಟೆ 9 ರಿಂದ ಅಕ್ಷರಾಭ್ಯಾಸ, ಸಂಜೆ ಗಂಟೆ 5ಕ್ಕೆ ಶೋಭಾಯಾತ್ರೆ, ವಿಗ್ರಹ ಜಲಸ್ಥಂಭನ ನಡೆಯಲಿದೆ. ಪ್ರತಿ ದಿನ ಸಂಜೆ ಗಂಟೆ 4 ರಿಂದ 7.30ರ ತನಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 7.30 ರಿಂದ ಭಜನೆ, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಮಂಗಳ, ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಲಾಗುವುದು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಹೆಚ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಶಾರದಾ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಸಾಯಿರಾಮ್ ರಾವ್, ಮಿತ್ರಂಪಾಡಿ ಜಯರಾಮ ರೈ (ಅಬುದಾಬಿ), ಚನಿಲ ತಿಮ್ಮಪ್ಪ ಶೆಟ್ಟಿ, ಸಹಜ್ ರೈ ಬಳಜ್ಜ, ಡಾ. ಗೌರಿ ಪೈ, ಕೂರೇಲು ಸಂಜೀವ ಪೂಜಾರಿ, ಸೂರಜ್ ನಾಯರ್, ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ನವೀನ್‌ಚಂದ್ರ ಪುನರ್ವಸು, ರವಿ ಎಂ.ಶೆಟ್ಟಿ ಮೂಡಂಬೈಲು(ಕತಾರ್), ಹರಿಣಿ ಪುತ್ತೂರಾಯ, ಕೃಷ್ಣ ಎಂ.ಅಳಿಕೆ, ಕೆದಂಬಾಡಿಗುತ್ತು ರತ್ನಾಕರ ರೈ, ಶಶಾಂಕ ಕೊಟೇಚಾ, ಮುರಳೀಕೃಷ್ಣ ಕುಕ್ಕುಪುಣಿ, ಶಶಿಕಲಾ ಸೋಮನಾಥ್ ರಾವ್, ವಿಜಯಲಕ್ಷ್ಮೀ ನಟ್ಟೋಜರವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ ಎಂದು ಅವರು ಹೇಳಿದರು.

ಅ.3 ರಿಂದ ಅ.11ರ ತನಕ ಪ್ರತಿ ದಿನ ಸಂಜೆ ಗಂಟೆ 4 ರಿಂದ 7.30 ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.3ರಂದು ಪಡುಮಲೆ ಮದುಮಿತಾ ರಾವ್ ಅವರಿಂದ ವೀಣಾ ವಾದನ ಬಳಿಕ ದರ್ಬೆ ಸಮೃದ್ಧಿ ಮ್ಯೂಸಿಕಲ್ಸ್ ವತಿಯಿಂದ ಸುಗಮ ಸಂಗೀತ, ಅ.4ಕ್ಕೆ ಕುಶಲ ಹಾಸ್ಯ ಬಳಗದಿಂದ ಹಾಸ್ಯ ಸಂಜೆ, ಬಳಿಕ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಯಕ್ಷಗಾನ ತಾಳಮದ್ದಳೆ ’ಗರುಡ ಗರ್ವ ಭಂಗ’. ಅ.5ಕ್ಕೆ ವಿದುಷಿ ಸುಚಿತ್ರಾ ಹೊಳ್ಳ ಅವರ ಶಿಷ್ಯೆಯರಾದ ಸುಪ್ರಜಾ ರಾವ್, ಸುಮಾನ ರಾವ್ ಅವರಿಂದ ಅದಾದ ಬಳಿಕ ಸರ್ಪಂಗಳ ಮಹಿಮಾ ಭಟ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.6ಕ್ಕೆ ಉಲಾಂಡಿ ಖುಷಿ ಅನಿಲ್ ದೇವಾಡಿಗ ಅವರಿಂದ ಸುಗಮ ಸಂಗೀತ, ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ’ಶ್ರೀ ದೇವಿ ಕೌಶಿಕೆ’. ಅ.7ಕ್ಕೆ ಶಿವಸ್ವರ ಸುಗಮ ಸಂಗೀತಾ ಶಾಲಾ ವಿದ್ಯಾರ್ಥಿಗಳಿಂದ ಭಕ್ತಿ ಭಾವ ಗಾನ ’ಸಂಗೀತ ಸಂಭ್ರಮ’, ಯಕ್ಷಕೂಟ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ’ಶ್ರೀ ಕೃಷ್ಣ ಪಾರಿಜಾತ’, ಅ.8ಕ್ಕೆ ವಿದುಷಿ ಸ್ವರ್ಣ ಎನ್ ಭಟ್ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ ’ಚಿತ್ರಸೇನ ಕಾಳಗ’, ಅ.9ಕ್ಕೆ ಪಟ್ಟಾಭಿರಾಮ ಸುಳ್ಯ ಇವರಿಂದ ನಗೆ ಹಬ್ಬ, ಗಾನಸಿರಿ ಕಲಾ ಕೇಂದ್ರ ಪುತ್ತೂರು ಇವರಿಂದ ಸುಮಧುರ ಸಂಗೀತ ಲಹರಿ, ಅ.10ಕ್ಕೆ ಭಾವನಾ ಕಲಾ ಆರ್ಟ್ಸ್ ಬೊಳುವಾರು ತಂಡದ ಕಲಾವಿದರಿಂದ ವಿಘ್ನೇಶ ವಿಶ್ವಕರ್ಮ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಲಾ ವೈಭವ, ಹರಿಣಿ ಗೌಡ ಸಾರಥ್ಯದ ಆರೋಹಣ ಮ್ಯೂಸಿಕ್ಸ್‌ನಿಂದ ಒಂದು ಬಾರಿ ಸ್ಮರಣೆ ಸಾಲದೇ ಕಾರ್ಯಕ್ರಮ, ಅ.11ಕ್ಕೆ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ’ಶಾಂಭವಿ ವಿಲಾಸ’ ನಡೆಯಲಿದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.

ಅ.11ಕ್ಕೆ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ದೀಪಪ್ರಜ್ವಲನೆ ಮಾಡಲಿದ್ದಾರೆ. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಾರದಾ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಗೌರವಿಸಲಾಗುವುದು ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.

ಮೆರವಣಿಗೆಯಲ್ಲಿ ಸ್ತಬ್ದಚಿತ್ರಗಳಿರುವುದಿಲ್ಲ. ಬದಲಾಗಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಜೋಡಿಸಲಾಗುತ್ತದೆ. ಅವೆಲ್ಲ ನಿಗದಿ ಪಡಿಸಿದ ಸ್ಥಳದಲ್ಲಿ ಪ್ರದರ್ಶನ ನೀಡಲಾಗುತ್ತದೆ. ಬೊಳುವಾರು ವೃತ್ತ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬ್ರದರ‍್ಸ್, ಪ್ರಧಾನ ಅಂಚೆ ಕಚೇರಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಂಜೀವ ಶೆಟ್ಟಿ ಅಂಗಡಿ ಬಳಿ, ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದ ಬಳಿ, ಅರುಣಾ ಕಲಾ ಮಂದಿರ, ಕಲ್ಲಾರೆ, ಹರ್ಷ ಬಳಿ, ದರ್ಬೆ ವೃತ್ತ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.

ಕಳೆದ ವರ್ಷ ಶಾರದೋತ್ಸವದ ಸಂದರ್ಭ ಪುತ್ತೂರು ಪೇಟೆಯಲ್ಲಿ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ಬಾರಿಯೂ ಅದು ಮುಂದುವರಿಯಲಿದೆ. ಕಳೆದ ವರ್ಷ ವೈಭವದ ಕಾರ್ಯಕ್ರಮ ಆಯೋಜನೆ ಮಾಡಿದ ಸಂದರ್ಭದಲ್ಲೇ ನಮಗೆ ಆರ್ಥಿಕವಾಗಿ ಹಣವೂ ಉಳಿಕೆಯಾಗಿದೆ. ಇದು ಶಾರದಾ ಮಾತೆಯ ಪವಾಡ ಆಗಿದೆ. ಹಾಗಾಗಿ ಈ ಬಾರಿಯೂ ವೈಭವದಿಂದ ಪುತ್ತೂರು ಶಾರದೋತ್ಸವ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡಿ.ಜೆ ಮತ್ತು ಪಟಾಕಿ ನಿಷೇಧಿಸಲಾಗಿದೆ. ಭಜನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಶಾರದಾ ಮಾತೆಯ ವಿಗ್ರಹ ಜಲಸ್ಥಂಭನವನ್ನೂ ಕಳೆದ ಬಾರಿಯಂತೆ ವಿಶೇಷ ಯಂತ್ರದ ಮೂಲಕ ಹಂತ ಹಂತವಾಗಿ ನೀರಿಗೆ ಇಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಹೊರೆಕಾಣಿಕೆ ಸಮಿತಿ ಸಂಚಾಲಕ ರಾಜೇಶ್ ಬನ್ನೂರು, ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್, ಡಾ. ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಪಿ.ಜ.ಜಗನ್ನಿವಾಸ ರಾವ್ ಜೊತೆಗಿದ್ದರು.

ವಿದ್ಯಾಮಾತೆ ಶಾರದೆಯ ಅನುಗ್ರಹಕ್ಕಾಗಿ ಅ.3ರಂದು ನವರಾತ್ರಿ ಪೂಜೆಯ ಆರಂಭದಲ್ಲಿ ಅಕ್ಷರಯಜ್ಞ ಸೇವೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಭಕ್ತಾಧಿಗಳು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತದೆ. ಮಂದಿರದಿಂದ ಒದಗಿಸಲಾದ ಪುಸ್ತಕಗಳಲ್ಲಿ ’ಶ್ರೀ ಶಾರದಾಂಬಾಯೈ ನಮ:’ ಎಂದು 108 ಬಾರಿ ಬರೆದು ಅ.8ರಂದು ಮಂದಿರಕ್ಕೆ ತಂದು ಒಪ್ಪಿಸಬೇಕು. ಅಕ್ಷರಯಜ್ಞದ ಪುಸ್ತಕವನ್ನು ಶ್ರೀ ದೇವರಿಗೆ ಸಮರ್ಪಿಸಿ ಸರಸ್ವತೀ ಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು ಎಂದು ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ಅವರು ತಿಳಿಸಿದರು.

HPR Institute Of Nursing And Paramedical Sciences & Friends Beke

ಜಾಹೀರಾತು

ಶಾರದೋತ್ಸವ ಆರಂಭಿಸಿ 90 ವರ್ಷ ಆಗಿರಬಹುದು ಆದರೆ ಶಾರದಾ ಭಜನಾ ಮಂದಿರಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ನಾನಾ ಪವಾಡಗಳು ಇಲ್ಲಿ ನಡೆದಿದೆ. ಭಜನಾಮಂದಿರದಲ್ಲಿ ನಿತ್ಯ ಕಿಟಕಿಯಲ್ಲಿ ದೇವರಿಗೆ ಬತ್ತಿ, ಎಣ್ಣೆಯನ್ನು ಅರ್ಪಿಸಿ ಹೋಗುತ್ತಿರುವವರು ಯಾರೆಂದು ಗಮನಿಸಿದಾಗ ಅನ್ಯಧರ್ಮದ ಕಣ್ಣುಕಾಣದ ವ್ಯಕ್ತಿಯೊಬ್ಬರು ಕಣ್ಣು ಕಂಡ ಹಿನ್ನೆಲೆಯಲ್ಲಿ ಮಂದಿರಕ್ಕೆ ಬರುತ್ತಿದ್ದರು. ಕಳೆದ ವರ್ಷವೂ ಶಾರದೋತ್ಸವ ಸಂದರ್ಭ ಅವರು ಬಂದು ಬತ್ತಿ, ಎಣ್ಣೆ ಸಮರ್ಪಣೆ ಮಾಡಿ ಹೋಗಿದ್ದಾರೆ. ಬಲ್ನಾಡು ಉಳ್ಳಾಲ್ತಿ ಅಮ್ಮ, ಪುತ್ತೂರು ಮಹಾಲಿಂಗೇಶ್ವರ, ಶಾರದಾ ಮಾತೆಗೆ ಅವಿನಾಭಾವ ಸಂಬಂಧದಿಂದ ಇಂತಹ ಅನೇಕ ಪವಾಡಗಳು ನಡೆದಿರುವ ಕುರಿತು ಮಾಹಿತಿ ಇದೆ.

SendShare9Share
Previous Post

“ಒಂದು ದೇಶ ಒಂದು ಚುನಾವಣೆ ” ಜಾರಿಗೆ ತರಲು 3 ಮಸೂದೆ ಜಾರಿಗೆ ‘ಕೇಂದ್ರ’ ಚಿಂತನೆ

Next Post

ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷ ಸಹಾಯಧನದ ಚೆಕ್ ಹಸ್ತಾಂತರ!

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..