ಸೌಜನ್ಯ ಹೋರಾಟ ಸಮಿತಿಯಿಂದ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನಕ್ಕೆ ಕರೆ
ನೋಟ ಮತದ ಪತ್ರ ಬಿಡುಗಡೆ
ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ನಿರೀಕ್ಷೆ-ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ತಿಮರೋಡಿ.
ಪುತ್ತೂರು: ಸುಮಾರು ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದಿಂದ ನ್ಯಾಯ ಸಿಗಲಿಲ್ಲ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಬೇಕೆಂದು ಅಭಿಯಾನ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ತಿಮರೋಡಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನೋಟ ಮತ ಪತ್ರ ಬಿಡುಗಡೆಗೊಳಿಸಲಾಯಿತು.
ನಾವು ಯಾವುದೇ ಪಕ್ಷವನ್ನು ದೂಷಣೆ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಸೋಲಿಸಲು ಮತ್ತು ಯಾರನ್ನೋ ತೇಜೋವಧೆ ಮಾಡು ನೋಟ ಅಭಿಯಾನ ಮಾಡುತ್ತಿಲ್ಲ. ಧರ್ಮದ ಸತ್ಯದ ಚುನಾವಣೆಯಾಗಿ ನೋಟಾ ಅಭಿಯಾನ ಮಾಡಲಿದ್ದೇವೆ. ನಮಗೆ ಮೇಲಿನವರು ಯಾರು ಅರ್ಹರಲ್ಲ ಎಂಬ ಉದ್ದೇಶದಿಂದ ನೋಟಾ ಅಭಿಯಾನ ಮಾಡುತ್ತಿದ್ದೇವೆ. ೧೨ ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಹಲವು ಕೇಸು ಹಾಕಿದ್ದಾರೆ. ಇಲ್ಲಿ ಶಾಶಾಂಗ ಸತ್ತಿದೆ. ಹಾಗಾಗಿ ನಾವು ನೋಟಾ ಕ್ಕೆ ಮತ ಚಲಾಯಿಸಲಿದ್ದೇವೆ. ನಮಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆಯಿದೆ ಎಂದರು.
ಭ್ರಷ್ಟಾಚಾರದಲ್ಲಿ ಈ ದೇಶ ನಂಬರ್ ವನ್ ವಿಶ್ವಗುರು ಬದಲು ನ್ಯಾಯಕ್ಕಾಗಿ ಮತದಾನ ಮಾಡಿ
ಹಿಂದುತ್ವದ ಆದಾರದಲ್ಲಿ ಮತದಾನ ಪಡೆದವರು ಎನು ಮಾಡುತ್ತಿದ್ದಾರೆ. ಹಿಂದು ಧರ್ಮವನ್ನು ಒಡೆಯುತ್ತಿದ್ದಾರೆ.
ಅಲ್ಲಿ ಸತ್ತಂತ ಸಾವಿರ ಆತ್ಮಗಳಿಗೆ ಶಾಂತಿ ಸಿಗಬೇಕು.
ನೋಟದಿಂದ ಬಹಳಷ್ಟು ಪಡೆಯಲು ಅವಕಾಶವಿದೆ.೧೦ ದಿವಸದಲ್ಲಿ ಎಲ್ಲವನ್ನು ಬಿಚ್ಚಿಡುತ್ತೇನೆ.ಮುಜುರಾಯಿ ಇಲಾಖೆಗೆ ಸೇರಿಸಿ ಬಿಜೆಪಿಯವರಿಗೆ ಧರ್ಮದ ಬೋಧನೆ ನಾನು ಮಾಡುತ್ತೇನೆ ಎಂದರು.
ಧಾರ್ಮಿಕ ಚಿಂತಕ ತಮ್ಮಣ್ಣ ಶೆಟ್ಟಿ ಅವರು ಮಾತನಾಡಿ ನಾವು ನ್ಯಾಯಾಕ್ಕಾಗಿ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಕರ ಪತ್ರದಲ್ಲಿ ಅನ್ಯಾಯ ಮಾಡುವುದು ಅಪರಾದ. ಅನ್ಯಾಯವನ್ನು ಸಹಿಸುವುದು ಮಹಾ ಅಪರಾಧ ಎಂದು ನಮ್ಮ ನೋಟಾ ಅಭಿಯಾನ ಕರ ಪತ್ರದಲ್ಲಿ ಉಲ್ಲೇಖಿಸಿದ್ದೇವೆ. ಇಲ್ಲಿನ ತನಕ ರಾಜಕೀಯ ಪಕ್ಷಗಳು ಹೆಣಗಳ ಮೇಲೆ ರಕ್ತಪಾತದ ಮೇಲೆ ಅಧಿಕಾರಕ್ಕೆ ಬಂದಿದೆ ಹೊರತು. ಅಭಿವೃದ್ದಿ ದೂರ ದೃಷ್ಟಿತ್ವದಿಂದ ಯಾರು ಗೆದ್ದದ್ದು ಇಲ್ಲ. ನೋಟಾ ಅಭಿಯಾನದಿಂದ ದೇಶ ನಮ್ಮನ್ನು ನೋಡುತ್ತದೆ.ಆಗ ಎಲ್ಲರು ಎಚ್ಚೆತ್ತು ಕೊಳ್ಳುತ್ತಾರೆ ಎಂದರು.
ಅಧಿಕಾರದಲ್ಲಿ ಇರುವವರು ನಕಲಿ ಹಿಂದುಗಳು, ನೈಜ ಹಿಂದುಗಳು ಮತ್ತು ನಕಲಿ ಹಿಂದುಗಳ ನಡುವೆ.
ನೋಟಾ ಆರಂಭಿಸಿದ್ದು ಮಹೇಶ್ ಶೆಟ್ಟಿಯವರನ್ನು ಎಂ ಪಿ ಮಾಡಲಲ್ಲ. ಯಾವುದೇ ಅಧಿಜಾರದ ಆಸೆಗಾಗಿ ಅಲ್ಲ.ನೋಟಾ ಅಭಿಯಾನದಲ್ಲಿ ಸ್ವಾರ್ಥವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭರತ್ ಕೆಮ್ಮಾರ, ಧಾರ್ಮಿಕ ಚಿಂತಕ ತಮ್ಮಣ್ಣ ಶೆಟ್ಟಿ, ಜಯಂತ್ ಟಿ ಉಪಸ್ಥಿತರಿದ್ದರು.