6 ಮಂದಿ ನಕ್ಸಲರ ಶರಣಾಗತಿಯಲ್ಲಿ ಧಿಡೀರ್ ಬದಲಾವಣೆಯಾಗಿದ್ದು, ಸಿಎಂ ಗೃಹ ಕಚೇರಿ ಯಲ್ಲಿ ನಕ್ಸಲರು ಸರೆಂಡರ್ ಆಗಲಿದ್ದಾರೆ. ಈ ಹಿನ್ನೆಲೆ ಬಾಳೆಹೊನ್ನೂರಿನಿಂದ ಬೆಂಗಳೂರಿಗೆ 6 ಮಂದಿ ನಕ್ಸಲರು ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೊದಲು ಚಿಕ್ಕಮಗಳೂರಿನ ಡಿಸಿ ಕಚೇರಿಯಲ್ಲಿ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು, ಇದೀಗ ಧಿಡೀರ್ ಆಗಿ ಬದಲಾವಣೆಯಾಗಿದೆ. ಶರಣಾಗುವ ನಕ್ಸಲರು ಯಾರು?
1. ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
2. ವನಜಾಕ್ಷಿ (ಬಾಳೆಹೊಳೆ ಕಳಸ)
3. ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
4. ಮಾರಪ್ಪ ಅರೋಳಿ (ಕರ್ನಾಟಕ)
5. ವಸಂತ ಟಿ (ತಮಿಳುನಾಡು)
6. ಎನ್. ಜೀಶಾ (ಕೇರಳ)
ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಬಳಿಕ ಆತನ ಅನುಯಾಯಿಗಳಾಗಿದ್ದ ನಕ್ಸಲರಿಗೆ ಶರಣಾಗುವಂತೆ ಸರ್ಕಾರ ಸೂಚನೆ ನೀಡಿತ್ತು. ಶರಣಾದ ನಕ್ಸಲರಿಗೆ ಆರ್ಥಿಕ, ಸಾಮಾಜಿಕ ನೆರವು, ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ 6 ನಕ್ಸಲರು ಶರಣಾಗಲು ನಿರ್ಧರಿಸಿದ್ದರು.