ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆ ದಾಳಿ ಹಿನ್ನೆಲೆ ಮಂಗಳೂರಿನ ನಿವಾಸದಿಂದ ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ್ ರವರನ್ನು ಬಂಧಿಸಲಾಗಿದೆ.
ಮಸಾಜ್ ಸೆಂಟರ್ ಗೆ ದಾಳಿ ನಾವೇ ನಡೆಸಿದ್ದಾಗಿ ಎಂದು ಪ್ರಸಾದ್ ಅತ್ತಾವರ ಒಪ್ಪಿಕೊಂಡಿದ್ದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಮಂಗಳೂರಿನ ಕುಡುಪು ಬಳಿಯ ಪ್ರಸಾದ್ ಅತ್ತಾವರ ನಿವಾಸದಿಂದ ಸಿಸಿಬಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ನಮ್ಮ ಕಾರ್ಯಕರ್ತರೇ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡ ಹಿನ್ನೆಲೆ ಬಂಧಿಸಿದ್ದು ಪ್ರಸಾದ್ ಅತ್ತಾವರ ಮನೆಯಲ್ಲಿ ಉಳಿದ ಕಾರ್ಯಕರ್ತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.