ವಿಟ್ಲ: ಜ. 21 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ಡ್ರೋನ್ ಹಾರಿಸಿ ಹುಚ್ಚಾಟ ಮೆರೆಯಲಾಗಿದೆ. ನಿಯಂತ್ರಣ ತಪ್ಪಿದ ಡ್ರೋನ್ ಉತ್ಸವ ಮೂರ್ತಿಗೆ ಬಡಿದು ಸಹಾಯಕ ಅರ್ಚಕರ ಮೇಲೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಸಹಾಯಕ ಅರ್ಚಕರು ಡ್ರೋನ್ ಅನ್ನು ಕಾಲಿನಿಂದ ಒದ್ದು ಕೆಳಗೆ ಹಾಕಿದ್ದಾರೆ. ಡ್ರೋನ್ ಅಪರೇಟರ್ ಹುಚ್ಚಾಟದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವ ಸಂದರ್ಭದಲ್ಲಿ, ಯಾರೋ ಒಬ್ಬರು ಅವೈಜ್ಞಾನಿಕವಾಗಿ ಡ್ರೋನ್ ಹಾರಾಟ ಮಾಡಿ, ಡ್ರೋಣ್ ತನ್ನ ನಿಯಂತ್ರಣವನ್ನು ಕಳೆದುಕೊಂಡು, ಡ್ರೋನ್ ದೇವರ ಪುಷ್ಪ ಕನ್ನಡಿಯ ಬಲಭಾಗಕ್ಕೆ ಹೊಡೆದು, ಬ್ರಹ್ಮವಾಹಕರ ಜೊತೆಗಿದ್ದ ತಂತ್ರಿ ವರ್ಗದ ಸಹಾಯಕರ ತಲೆಗೆ ಹೊಡೆದಿದೆ, ಈ ಸಂದರ್ಭದಲ್ಲಿ ಅವರ ತಲೆಗೆ ಏಟಾಗಿದೆ, ಆದರೆ ಸ್ಥಳೀಯರು ಹೇಳುವ ಪ್ರಕಾರ, ಡ್ರೋನ್ ಹಾರಾಟ ಮಾಡಿದ ವ್ಯಕ್ತಿ ಮಾಡಿದ ವ್ಯಕ್ತಿ ಸ್ಥಳೀಯನೆಯಾಗಿದ್ದು, ಇದನ್ನು ಹಾರಾಟ ಮಾಡಲು ಸರಿಯಾದ ರೀತಿಯಲ್ಲಿ ತಿಳಿದಿಲ್ಲವಾದ್ದರಿಂದ ಈ ಅವಘಡ ಹೇಳುತ್ತಾರೆ. ಫೋಟೋಗ್ರಾಪರ್ ಗಳಿಗೆ ಸೌತ್ ಕೆನರಾ ಫೋಟೋಗ್ರಾಪರ್ ಅಸೋಸಿಯೇಷನ್ ಇದ್ದು ಅದರಲ್ಲಿ ಮೆಂಬರ್ ಕೂಡ ಆಗಿಲ್ಲ.
ಆದರೆ ಇಂಥ ಘಟನೆಗಳಿಂದ ಪ್ರೊಫೆಷನಲ್ ವಿಡಿಯೋಗ್ರಾಫರ್ ಮತ್ತು ಡ್ರೋನ್ ಆಪರೇಟರ್ಗಳ ಹೆಸರಿಗೆ ಕಳಂಕವಾಗಿದೆ.
ಈಗೀಗ ಹಲವು ಕಡೆ ಜಾತ್ರೋತ್ಸವ, ಬ್ರಹ್ಮಕಲಶ, ನೇಮೋತ್ಸವ ಹಾಗೂ ಮದುವೆ ಸಂದರ್ಭದಲ್ಲಿ ಈ ಡ್ರೋನ್ ಮೂಲಕ ವಿಡಿಯೋ ಶೂಟಿಂಗನ್ನು ಮಾಡುತ್ತಾರೆ,
ಇಂಥ ಎಲ್ಲಾ ಕಡೆಗಳಲ್ಲಿಯೂ ಆಯಾ ದೇವಸ್ಥಾನ, ದೈವಸ್ಥಾನ, ಮತ್ತು ಇತರ ಕಾರ್ಯಕ್ರಮಗಳಲ್ಲಿ ತಕ್ಕಮಟ್ಟಿಗೆ ಇದರಲ್ಲಿ ಪರಿಣಿತರನ್ನು ಯೋಜಿಸುವುದು ಉತ್ತಮ. ಇಲ್ಲವಾದರೆ ಇಂತಹ ಹಲವು ಘಟನೆಗಳು ನಡೆಯುವುದರಲ್ಲಿ ಸಂದೇಹವಿಲ್ಲ.
ಇಲ್ಲವಾದರೆ ಇಂತಹ ಅನಧಿಕೃತ ಡ್ರೋನ್ ಹಾರಾಟಗಾರರಿಂದ ಅಪಾಯ ತಪ್ಪಿದ್ದಲ್ಲ. ಅದೇ ರೀತಿ ಇಂತಹ ಜಾತ್ರೋತ್ಸವ, ನೇಮೋತ್ಸವ ಸಂದರ್ಭದಲ್ಲಿ ಸ್ಥಳಿಯ ಪೊಲೀಸ್ ಠಾಣೆಗಳಿಂದ ಪರ್ಮಿಷನನ್ನು ಪಡೆದುಕೊಳ್ಳಲು ಸೂಚಿಸಬೇಕು, ಈ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ ಎಸೋಷಿಯೇಷನ್ ನವರು ಸ್ವಲ್ಪ ಜಾಗರೂಕಾರಾಗಿರಬೇಕು.
ಇಂತಹ ಅನಧಿಕೃತ ಡ್ರೋನ್ನವರಿಂದ ಪ್ರೊಫೆಷನಲ್ ವಿಡಿಯೋಗ್ರಾಫರ್ ಗಳ ಹೆಸರಿಗೆ ಕಳಂಕ ತಪಿದ್ದಲ್ಲ.