ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧೀನದ ಜಾಗದಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಮನೆ ನೆಲಸಮವಾಗಿದೆ.
ಇತ್ತೀಚೆಗೆ ಶಾಸಕರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ದೇವಸ್ಥಾನದ ಜಮೀನಿನಲ್ಲಿದ್ದ ಬಾಡಿಗೆ ಮನೆಯ ಮಾಲೀಕರನ್ನು ಮನವೊಲಿಸಿ ಅಭಿವೃದ್ಧಿ ಕಾರ್ಯಕ್ಕೆ ಸ್ವ ಇಚ್ಛೆಯಿಂದ ಮನೆಯನ್ನು ತೆರೆವುಗೊಳಿಸಬೇಕೆಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಹೆಚ್ಚಿನ ಮನೆಯವರು ಸ್ವಯಿಚ್ಛೆಯಿಂದ ಮನೆಯನ್ನು ತೆರವುಗೊಳಿಸಿದ್ದಾರೆ. ಆದರೆ ಜಮೀನಿನಲ್ಲಿದ್ದ ಉಜಿರೆ ನಿವಾಸಿ ವಕೀಲರೊಬ್ಬರಿಗೆ ಸೇರಿದ ಮನೆ ಮತ್ತು ರಾಜೇಶ್ ಬನ್ನೂರು ಗೆ ಮನೆ ತೆರವಿಗೆ ಒಪ್ಪಿಗೆ ನೀಡಿರಲಿಲ್ಲ. ಎರಡು ದಿನಗಳ ಹಿಂದೆ, ಉಜಿರೆ ನಿವಾಸಿ ವಕೀಲರಿಗೆ ಸೇರಿದ ಮನೆಗೆ ಜೆಸಿಬಿ ಯಂತ್ರ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದು ಹಾನಿಯಾದ ಹಿನ್ನೆಲೆ ಬಳಿಕ ಅದನ್ನು ತೆರೆವುಗೊಳಿಸಲಾಗಿತ್ತು. ನಿನ್ನೆ ರಾತ್ರಿ ರಾಜೇಶ್ ಬನ್ನೂರಿಗೂ ಸೇರಿದ ಮನೆ ನೆಲಸಮವಾಗಿದೆ. ನೆಲಸಮಗೊಳಿಸಿದ್ದು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.