ನನಗೆ ಯಾರು ಸರಕಾರಿ ವೈದ್ಯರು ಕರೆ ಮಾಡಲಿಲ್ಲ.ನನಗೆ ಮಾಧ್ಯಮದ ಮುಖಾಂತರ ಮಾಹಿತಿ ತಿಳಿಯಿತು.ಕೂಡಲೇ ಅಧಿಕಾರಿಗಳ ಬಳಿ ವಿಚಾರಿಸಿ ಮಾಹಿತಿ ಪಡೆದುಕೊಂಡೆ. ಡಾಕ್ಟರ್ ಮೇಲೆ ನಡೆದ ಘಟನೆ ತಪ್ಪು. ಪುತ್ತೂರಿನ ಸರಕಾರಿ ಆಸ್ಪತ್ರೆ ಉಳಿದ ಸರಕಾರಿ ಆಸ್ಪತ್ರೆಗೆ ಹೋಲಿಸಿದರೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಸರಕಾರಿ ಆಸ್ಪತ್ರೆಗೆ ಹೋದ ಕೂಡ್ಲೆ ಅದು ನನ್ನ ಗಂಟು ನನ್ನ ಆಸ್ತಿ ಎಂದು ತಿಳ್ಕೊಳ್ಳುವುದನ್ನು ಬಿಡಬೇಕು.
ಕಾನೂನು ಕ್ರಮಗಳನ್ನು ಕೈಗೊಳ್ಳುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ.ಇದರಲ್ಲಿ ರಾಜಕೀಯ ಮಾಡುವುದು ಅಗತ್ಯವಿಲ್ಲ.ನಮಗೆ ಪುತ್ತೂರಿನ ಅಭಿವೃದಿ ಬೇಕು.ನ್ಯಾಯ ಕೊಡಿಸುವ ಕೆಲಸ ನಾವು ಮಾಡ್ತೆವೆ.ಡಾಕ್ಟರ್ ಗಳಿಂದಲೂ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ನಾವು ನೋಡಿದ್ದೇವೆ.ಡಾಕ್ಟರ್ ಗಳಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ.ಇಲ್ಲಿ ಸಾರ್ವಜನಿಕರು ಮಾಡಿರುವಂತಹುದು ತಪ್ಪು.ಕೂಡಲೇ ಎಸ್ಪಿ, ಡಿ ವೈ ಎಸ್ಪಿ ಅವರಿಗೆ ಮಾತನಾಡಿದ್ದೇನೆ.
ಕಾನೂನು ಕ್ರಮ ಕೈಗೊಳ್ಳಬೇಕು ಸಾಯಂಕಾಲ 6 ಗಂಟೆಯೊಳಗೆ ಕರೆದುಕೊಂಡು ಬರುವ ಕೆಲಸ ಆಗಬೇಕು.ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ. ಡಾಕ್ಟರ್ ಗಳು ಹೆದರಬೇಕಾಗಿಲ್ಲ.ಅಸೋಶಿಯೇಷನ್ ಬಳಿ ಹೇಳುವುದ ದಯವಿಟ್ಟು ರಾಜಕೀಯ ಮಾಡಲು ಹೋಗಬೇಡಿ. ನಾವು ರಾಜಕೀಯ ಮಾಡಿ ಮನೆಗೆ ಹೋಗುತ್ತೇವೆ. ನಿಮ್ಮ ಆಸ್ಪತ್ರೆ ನೀವು ಮಾಡಬೇಕಾಗುತ್ತದೆ. ಅಲ್ಲಿ ಸಾರ್ವಜನಿಕರಿಗೆ ನ್ಯಾಯ ಸಿಗಬೇಕಾಗುತ್ತದೆ ಎಂದರು.