ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ (ರಿ) ಪುತ್ತೂರು,
ಮಾದರಿ ಗ್ರಾಮ ಸಮಿತಿ ಉಜಿರುಪಾದೆ ಬಲ್ನಾಡು. ವತಿಯಿಂದ ಆಟಿ ಆಚರಣೆ, ಮತ್ತು ಸನ್ಮಾನ ಕಾರ್ಯಕ್ರಮ.
ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಬಲ್ನಾಡಿ ನಲ್ಲಿ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ.), ಪುತ್ತೂರು ಪುತ್ತೂರು, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ.) ಪುತ್ತೂರು, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಆಶ್ರಯದಲ್ಲಿ ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಇಂದು ನಡೆಯಿತು.ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗ್ರಾಮದ ಸ್ಥಳೀಯರು ನೀಡಿದ ಸೇವೆಗಾಗಿ ಸಮುದಾಯದವರಾದ ಸತೀಶ್ ಗೌಡ ಒಳಗುಡ್ಡೆ, ಸೀತಾರಾಮ ಗೌಡ ಕಾಂತಿಲ ತೀರ್ಥ ಪ್ರಸಾದ್ ಕಾಂತಿಲ, ಅಚ್ಚುತ ಗೌಡ ಕೋಡಿಯಡ್ಕ ಲೋಕೇಶ್ ಗೌಡ ಪಟ್ಟೆ ಇವರಿಗೆ ಅಥಿತಿಗಳಿಂದ ಸನ್ಮಾನ ನೀಡಿ ಗೌರವಿಸಲಾಯಿತು.
1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸ್ವ ಸಹಾಯ ಟ್ರಸ್ಟ್ (ರಿ) ಅಧ್ಯಕ್ಷರಾದ ಡಿ.ವಿ ಮನೋಹರ್ ಗೌಡ, ರವಿ ಮುಂಗ್ಲಿಮನೆ, ಚಿದಾನಂದ ಬೈಲಾಡಿ, ಶ್ರೀಮತಿ ವಾರಿಜ ಬೆಳಿಯಪ್ಪ ಗೌಡ, ಗೋಪಾಲಕೃಷ್ಣ ಪಟೇಲ್ ಚಾರ್ವಕ, ಶ್ರೀಮತಿ ಗೀತಾ ಒಳಗುಡ್ಡೆ, ಶ್ರೀ ನಾರಾಯಣ ಗೌಡ ಕುಕ್ಕುತ್ತಡಿ, ಮಾಧವ ಗೌಡ ಕಾಂತಿಲ, ಚಂದ್ರಾವತಿ ಮುದಲಾಜೆ, ಸಂತೋಷ್ ಒಳಗುಡ್ಡೆ, ಮುತ್ತಪ್ಪ ಗೌಡ ಕಾಂತಿಲ, ಅಚ್ಚುತ ಕಲ್ಲಾಜೆ, ಮತ್ತು ಗೌಡ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಆಟಿ ತಿಂಗಳಿನ ಖಾದ್ಯ, ರುಚಿಕರ ಊಟದಿಂದ ಕಾರ್ಯಕ್ರಮ ಕೊನೆಗೊಂಡಿತು.