ಕೋಡಿಂಬಾಡಿ ಮಠಂತಬೆಟ್ಟು ಗುಲಾಬಿ ಅನಂತ ರೈ(88) ಯವರು ವಯೋಸಹಜ,ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ನಿಧನರಾದರು.
ಇವರು ಮಠಂತಬೆಟ್ಟು ಕೀರ್ತಿಶೇಷ ಪಟೇಲ್ ಅನಂತ ರೈಯವರ ಧರ್ಮಪತ್ನಿ.
ಇವರು ಆ ಕಾಲದ ಕೋಡಿಂಬಾಡಿ ಪಂಚಾಯತ್ ಪ್ರತಿನಿಧಿಯಾಗಿದ್ದರು,ಕೋಡಿಂಬಾಡಿ ವನಿತಾ ಸಮಾಜದ ಸ್ಥಾಪಕ ಸದಸ್ಯರಾಗಿದ್ದು,ಧಾರ್ಮಿಕ, ಶೈಕ್ಷಣಿಕ, ಸಾರ್ವಜನಿಕ ಕ್ಷೇತ್ರದಲ್ಲಿ ಜನಾನುರಾಗಿದ್ದರು.ಇವರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು,ಮತ್ತು ಕೃಷಿಕರಾದ ರಾಜಮಣಿ ರೈ ಯೆಂಬ ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಹಾಗೂ ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವರು.
ನಾಳೆ ದಿನಾಂಕ 24-04-2024 ರಂದು ಸ್ವಗೃಹ ಮಠಂತಬೆಟ್ಟು ಮನೆಯಲ್ಲಿ ಅಂತ್ಯ ಸಂಸ್ಕಾರ ವಿಧಿವಿಧಾನ ಕ್ರಮ ನಡೆಯಲಿದೆ.