ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮೃತ್ಯುಂಜಯ ಸೂಕ್ತ ಜಪ 1008 ನಡೆಯಿತು.
ಪುತ್ತೂರು ಪರಿಸರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಜಪ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಳೆದ ಕೆಲ ತಿಂಗಳಿಂದ ಪುತ್ತೂರು ಆಸುಪಾಸಿನಲ್ಲಿ ಅನೇಕ ಯುವಕರು ಅಪಘಾತದಿಂದ *ಮೃತಪಟ್ಟಿದ್ದಾರೆ. ದಿನೇ ದಿನೇ ಈ ರೀತಿಯ ಮೃತ್ಯು ಪ್ರಕರಣಗಳು ಅಧಿಕವಾಗುತ್ತಲೇ ಇದೆ, ಸಾವು ನೋವುಗಳು ,ಕುಟುಂಬಗಳ ಆಕ್ರಂಧನ ಮುಗಿಲುಮುಟ್ಟುವಂತಿದೆ ಇದನ್ನು ಕಂಡು ಶಾಸಕ ಅಶೋಕ್ ರೈ ನೊಂದುಕೊಂಡಿದ್ದು ಇನ್ನೆಂದೂ ಇಂಥಹ ದುರ್ಮರಣಗಳು ತನ್ನ ಕ್ಷೇತ್ರದಲ್ಲಿ ಯಾರಿಗೂ ಸಂಭವಿಸದಿರಲಿ( ಸರ್ವ ಧರ್ಮಿಯರಿಗಾಗಿ) ಎಂದು ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮೃತ್ಯುಂಜಯ ಜಪ ನಡೆಸಿದ್ದಾರೆ. ವೈಧಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು
ಪ್ರಧಾನ ಅರ್ಚಕ ವಸಂತ ಕೆದಿಲಾಯ ಹಾಗೂ ಜಯರಾಮ ಜೋಯಿಸರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಮುಂದೆ ಯಾವುದೇ ಅನಾಹುತ, ಮೃತ್ಯು ಕಂಟಕ ಆಗದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಜಪ ಹಾಗೂ ಪೂಜೆ ನಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.




























