ಬೆಳ್ತಂಗಡಿ : ಅ 16 ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಹುಣ್ಸೆಕಟ್ಟೆ, ಕಳಿಯ ಹಾಗೂ ಕೊಯ್ಯೂರು ಗ್ರಾಮಗಳ ಸಾರ್ವಜನಿಕರ/ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಅವಶ್ಯ ಸಮಯಕ್ಕೆ ಬಸ್ ಗಳ ರೂಟ್ ಸೇವೆಯನ್ನು ಪ್ರಾರಂಭಿಸುವ ಕುರಿತು ಸೂಚನೆ ನೀಡಲಾಯಿತು. ಇಂದು ಹುಣ್ಸೆಕಟ್ಟೆಯಿಂದ ಗೇರುಕಟ್ಟೆ ಮಾರ್ಗವಾಗಿ ಪರಪ್ಪು ಕೊಯ್ಯೂರು ಬಸ್ ಸಂಚಾರ ಆರಂಭಗೊಂಡಿದೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರು ಅಭಿನಂದನೆ ಸಲ್ಲಿಸಿದರು.