ಪಾಕಿಸ್ತಾನದ ಮಿಲಿಟರಿಯ ಸುಳ್ಳು, ಕಪಟ ಜಗತ್ತಿನ ಮುಂದೆ ಮತ್ತೊಮ್ಮೆ ಬಹಿರಂಗಗೊಂಡಿದೆ. ಅಕ್ಟೋಬರ್ 9ರಂದು ಕಾಬೂಲ್ ಸ್ಫೋಟದಲ್ಲಿ ನಾವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥನನ್ನು ಹತ್ಯೆ ಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ಇಸ್ಲಾಮಾಬಾದ್ ಕೊಂದಿದ್ದೇವೆ ಎಂದು ಹೇಳಿಕೊಂಡಿರುವ ಅದೇ ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಇದೀಗ ಜಗತ್ತಿನ ಮುಂದೆ ಕಾಣಿಸಿಕೊಂಡಿದ್ದಾರೆ! ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ನೂರ್ ವಾಲಿ, ಪಾಕಿಸ್ತಾನ ಮಿಲಿಟರಿ ನನ್ನನ್ನು ಕೊಂದಿದ್ದೇನೆಂದು ಸುಳ್ಳು ಹೇಳಿಕೆ ನೀಡಿದೆ. ನಾನಿನ್ನೂ ಸತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಪಾಕಿಸ್ತಾನದೊಳಗಿನ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಟಿಟಿಪಿ ಮುಖ್ಯಸ್ಥ, ಪಾಕಿಸ್ತಾನದ ನಾಗರಿಕರು ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ಮೋಸಗೊಳಿಸಲು ನನ್ನ ಸಾವಿನ ಬಗ್ಗೆ ಪಾಕಿಸ್ತಾನದ ಸೇನೆಯು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.