ಮುಂಡೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು 22ನೇ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ. ಪುತ್ತಿಲ ಪರಿವಾರಸೇವಾ ಟ್ರಸ್ಟ್ ನ ಸಮಾಜಮುಖಿ ಕೆಲಸ ಕಾರ್ಯಗಳು ಶ್ಲಾಘನೀಯ
ಡಾ. ಸೀತಾರಾಮ್ ಭಟ್.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖಾಂತರ ಕಳೆದ ಮೂರು ವರ್ಷಗಳಲ್ಲಿ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಸಮಾಜದಲ್ಲಿ ಯುವಕರಿಗೆ ಪ್ರೇರಣೆಯಾಗಿದೆ. ಒಂದು ಸಂಘಟನೆಯ ಮುಖಾಂತರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೆ ಶಕ್ತಿಯನ್ನ ತುಂಬತಕ್ಕಂಥ ಕೆಲಸಕಾರ್ಯ, ಸಾಮಾಜಿಕ ಪರಿವರ್ತನೆಯ ಮುಖಾಂತರ ಸಮಾಜಕ್ಕೆ ಶಕ್ತಿಯನ್ನು ಕೊಡುವ ಕೆಲಸ ಕಾರ್ಯ, ಧಾರ್ಮಿಕ ಶ್ರದ್ಧೆಯನ್ನು ಉಳಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯವನ್ನು ಮಾಡಿ,ಹಿಂದೂ ಸಮಾಜದ ಕೆಲಸವನ್ನು ಮಾಡಿ ಪುತ್ತೂರಿನ ಜನಮಾನಸದಲ್ಲಿ ಒಂದು ವಿಶೇಷವಾದ ಸ್ಥಾನವನ್ನು ಪಡೆದಿದೆ. ಈ ರೀತಿಯ ಕೆಲಸ ನಿಜವಾಗಿಯೂ ಒಬ್ಬ ಜನಸೇವಕ ಮಾಡುವ ಕಾರ್ಯ, ಇನ್ನು ಮುಂದೆಯೂ ಈ ರೀತಿಯ ಸಾಮಾಜಿಕ ಕೆಲಸ ಮಾಡಲು ಅವರಿಗೆ ಭಗವಂತ ಶಕ್ತಿ ನೀಡಲಿ ಮತ್ತು ನಾವೆಲ್ಲರೂ ಅರುಣಣ್ಣ ನ ಜೊತೆ ಕೈಜೋಡಿಸಲು ಸಿದ್ದ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಮಾತಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸ ಟ್ರಸ್ಟ್ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸ ತಂದಿದೆ ನಾವೆಲ್ಲರೂ ನಿಮ್ಮ ಜೊತೆ ಯಾವಾಗಲೂ ಇದ್ದೇವೆ ಎಂದರು.
ವೇದಿಕೆ ಯಲ್ಲಿ ಟ್ರಸ್ಟ್ ಅಧ್ಯಕ್ಷರಾದ ಶ್ರೀರಾಮ ಭಟ್, ಡಾ ಅಪೂರ್ವ ಕೋಟ್ಯಾನ್, ದೇವಾನಂದ, ಪರಮೇಶ್ವರ್ ನಾಯ್ಕ್, ಬಾಲಚಂದ್ರ ಗೌಡ ಕಡ್ಯ, ಡಾ ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಾಯತ್ ಸದಸ್ಯ ರಾದ, ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ, ಅರುಣಾ ಅನಿಲ್, ಅನಿಲ್ ಕಣ್ಣರ್ನೋಜಿ, ಧನಂಜಯ ಕಲ್ಲಮ,ಜನಾರ್ದನ ಪೂಜಾರಿ ಪೂಜಾರಿ,ಅವಿನಾಶ್ ಕೇದಾಗೆದಡಿ, ಸದಾಶಿವ ಶೆಟ್ಟಿ, ಸುಧೀರ್ ಶೆಟ್ಟಿ,ಸಂತೋಷ್ ರೈ,ಹರೀಶ್ ನಾಯ್ಕ್ ನೀಲಪ್ಪ ಪೂಜಾರಿ, ಸುಂದರ ನಾಯ್ಕ್. ಪುಷ್ಪ, ಗೀತಾ, ರಮೇಶ್, ಮೋನಪ್ಪ ಗುತ್ತಿನಪಾಲು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಸುಮಾರು 25 ಮಂದಿ ರಕ್ತ ದಾನ ಮಾಡಿದರು ಅಶೋಕ್ ಸ್ವಾಗತಿಸಿ ಅನಿಲ್ ವಂದಿಸಿದರು, ಬಾಲಚಂದ್ರ ಸೊರಕ್ಕೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 300 ಕ್ಕಿಂತಲೂ ಹೆಚ್ಚು ಮಂದಿ ಈ ಶಿಬಿರದ ಸದುಪಯೋಗ ಪಡಕೊಂಡರು.ಈ ಶಿಬಿರದಲ್ಲಿ ECG,ಬಿಪಿ, ಶುಗರ್, ಕಿವಿ, ಮೂಗು, ಗಂಟಲು, ಕಣ್ಣು ಪರೀಕ್ಷೆ, ಉಚಿತ ಕನ್ನಡಕ ವಿತರಣೆ, ಹಲ್ಲು ಪರೀಕ್ಷೆ ಮತ್ತು ಚಿಕೆತ್ಸೆ. ಎಲುಬು, ಚರ್ಮ ಮತ್ತು ಮಕ್ಕಳ ವಿಭಾಗ ದ ಸೇವೆ ಗಳು ಲಭ್ಯ ವಿದ್ದು ಸಾರ್ವಜನಿಕರು ಸದುಪಯೋಗ ಪಡೆದರು.