ಪುತ್ತೂರು: ಪುತ್ತೂರು ಜನತೆಯ ಬಹುವರ್ಷಗಳ ಕನಸು ಈಡೇರಿದೆ, ಶಾಸಕ ಅಶೋಕ್ ರೈ ಅವರು ಚುನಾವಣೆಯ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ಪುತ್ತೂರಿನಲ್ಲಿ ಸದಾ ಸುದ್ದಿಯಲ್ಲಿದ್ದ ಮೆಡಿಕಲ್ ಕಾಲೇಜಿಗೆ ಸರಕಾರದಿಂದ ಅಧಿಕೃತ ಮಾನ್ಯತೆ ದೊರಕಿದ್ದು ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಅವರು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಆದೇಶ ಸಕ್ಕಿದೆ, ಜೊತೆಗೆ 300 ಬೆಡ್‌ಗಳ ಆಸ್ಪತ್ರೆಗೂ ಸರಕಾರದಿಂದ ಅನುಮೋದನೆ ಸಿಕ್ಕಿದೆ, ಇನ್ನು ಮುಂದೆ ಶಿಲಾನ್ಯಾಸ ನೆರವೇರುವುದ ಜೊತೆಗೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿಗೆ ಸರಕಾರದಿಂದ ಅಧಿಕೃತ ಆದೇಶ ಪ್ರಕಟವಾದ ಸುದ್ದಿ ಸಿಗುತ್ತಿದ್ದಂತೆಯೇ ಶಾಸಕರು ಕೋಡಿಂಬಾಡಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಪುತ್ತೂರಿನ ಶ್ರೀ ಮಹಾಲಿಮಗೇಶ್ವರ ದೇವಸ್ಥಾನ , ಪುತ್ತೂರು ಕೇಂದ್ರ ಜುಮಾ ಮಸೀದಿ ಹಾಗೂ ಪುತ್ತೂರು ಮಾಯಿದೆದೇವುಸ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಶಾಸಕರ ಜೊತೆ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ , ಕೆಪಿಸಿಸಿ ಸಂಯೋಜಕರಾದ ಕಾವು ಹೇನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ , ಉಮಾನಾಥ ಶೆಟ್ಟಿ ಪೆರ್ನೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟುಪ್ರಮುಖರಾದ ಸುದೆಶ್ ಶೆಟಿ, ಶಿವರಾಮ ಆಳ್ವ, ರವಿಪ್ರಸಾದ್ ಶೆಟ್ಟಿ ಬನ್ನೂರು, ಪಂಜಿಗುಡ್ಡೆ ಈಶ್ವರಭ್, ರೋಶನ್ ರೈ ಬನ್ನೂರು, ಫಾರೂಕ್ ಬಾಯಬ್ಬೆ, ನೂರುದ್ದೀನ್ ಸಾಲ್ಮರ, ಅಬ್ದುಲ್ ರಹಿಮಾನ್ ಆಝಾದ್, ಸಿಯಾನ್ ದರ್ಬೆ, ವಿನಯ್ , ಶರೂನ್ ಸಿಕ್ವೆರಾ, ಲ್ಯಾನ್ಸಿ ಮಸ್ಕರೇನಸ್ ಸೇರಿದಂತೆ ಪ್ರಮುಖರು ಇದ್ದರು.























