ರಬ್ಬರ್ ಮತ್ತು ಇತರ ಕೃಷಿ ಕಾರ್ಮಿಕರಿಗೆ ಹಾಗೂ ಸ್ವಂತ ತೋಟದ ಸ್ವಂತ ಬೆಳೆಗಾರ ಟ್ಯಾಪರ್ ಗಳಿಗೆ ರಬ್ಬರ್ ಮಂಡಳಿಯಿಂದ ಕೆಲವೊಂದು ಸೌಲಭ್ಯಗಳಿದ್ದು ಈ ಸೌಲಭ್ಯಗಳು ಅಲ್ಪ ಮಟ್ಟದ್ದಾಗಿದ್ದು ಇದನ್ನು ಹೆಚ್ಚು ಗೊಳಿಸುವಂತೆ ಹಾಗೂ ಕಾರ್ಮಿಕರಿಗೆ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಮಾನ್ಯ ಸಂಸದರಿಗೆ ಮನವಿಯನ್ನು ನೀಡಲಾಯಿತು ಉಜಿರೆಯಲ್ಲಿ ನಡೆದ ರಾಜ್ಯ ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಸಂಸದರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ಬಿಎಂಎಸ್ ರಾಜ್ಯ ಕಾರ್ಯದರ್ಶಿ, ಎ.ಜೈ ರಾಜ್ ಸಾಲಿಯಾನ್ ಕಾನರ್ಪ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷರಾದ ರಘುಪತಿ ತೋಡಿಕಾನ, ಪ್ರಧಾನ ಕಾರ್ಯದರ್ಶಿ ಹರೀಶ್ ಜೆಕೆ,ಬಿಎಂಎಸ್ ತಾಲೂಕು ಸಮಿತಿ ಅದ್ಯಕ್ಷರಾದ ವಕೀಲರಾದ ಉದಯ ಬಿ.ಕೆ ಜಿಲ್ಲಾ ಪದಾಧಿಕಾರಿಗಳಾದ ಆನಂದ್ ರಾಜ್ ಅರುಣವರ್ಧನ್ ರಾಜಮಾಚಾರ್. ಮೋಹನ್ ಕುಮಾರ್ ನಾಗೇಂದ್ರ ನ್ ಸುರೇಂದ್ರ ಹರಿಶ್ಚಂದ್ರ ಮತ್ತು ವಿನಯ ಚಂದ್ರ ಕಿಲ್ಲೂರು
ಉಪಸ್ಥಿತರಿದ್ದರು ನಂತರದ ಸಮಾವೇಶದಲ್ಲಿ ಭಾಗವಹಿಸಿದ ರಬ್ಬರ್ ಮಂಡಳಿಯ ಹಿರಿಯ ಅಧಿಕಾರಿ ಪವಿತ್ರಂ ನಂಬಿಯಾರ್ ಅವರ ಮೂಲಕ ರಬ್ಬರ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ಗೇಸನ್ ಅವರಿಗೆ ಕಾರ್ಮಿಕರ ವಿವಿಧ ಬೇಡಿಕೆಯ ಮನವಿಯನ್ನು ನೀಡಲಾಯಿತು. ಈಡ ಸಂದರ್ಭದಲ್ಲಿ ರಬ್ಬರ್ ಮಂಡಳಿಯ ನಿರ್ದೇಶಕರಾದ ಕೇಶವಪ್ರಸಾದ್ ಅವರಿಗೂ ಮನವಿಯನ್ನು ಸಲ್ಲಿಸಲಾಯಿತು























