ಪುತ್ತೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಹಿಂದೂ ವಿರೋಧಿ ಅನ್ನೋದನ್ನ ಸಾಬೀತುಪಡಿಸಿದೆ, ಮುಂದಿನ ಚುನಾವಣೆಯಲ್ಲಿ ಮುಸ್ಲಿಮರ ಮತ ಪಡೆಯುವಂತಹ ಹುನ್ನಾರ ಮತ್ತು ಹಿಂದೂ ಸಂಘಟನೆಗಳನ್ನು ಮತ್ತು ಹಿಂದೂ ನಾಯಕರನ್ನು, ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನದ ಒಂದು ಭಾಗ ಈ ಮಸೂದೆಯಾಗಿವೆ.
ಈ ಮಸೂದೆಯನ್ನ ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಅಕ್ರಮ ಗೋಸಾಗಾಟ ವಿರುದ್ಧ ಇರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ಕ್ಕೆ ಬದಲಾವಣೆ ತರಲು ಯೋಚಿಸುತ್ತಿದ್ದು ಮತ್ತೆ ಇದರಿಂದ ಗೋ ಹತ್ಯೆ ಮಾಡಲು ಪರೋಕ್ಷವಾಗಿ ಬೆಂಬಲ ನೀಡುವ ತಂತ್ರಗಾರಿಕೆಯೂ ಅಡಗಿದೆ.
ಈ ಮೂಲಕ ಇನ್ಮುಂದೆ ರಾಜ್ಯದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಿ, ಸಿಕ್ಕಿಬಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ, ಪೊಲೀಸರು ವಶಪಡಿಸಿಕೊಂಡ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವಾಹನಗಳು ಆರೋಪಿಗಳಿಗೆ ಸುಲಭವಾಗಿ ಮರಳಿ ಸಿಗಲಿದೆ. ಈ ಮೂಲಕ ಮತ್ತೊಮ್ಮೆ ತನ್ನ ಓಲೈಕೆ ರಾಜಕಾರಣದ ಪರಾಕಾಷ್ಠೆಯಿಂದ ಹಿಂದೂ ವಿರೋಧಿ ನೀತಿಯನ್ನು ರಾಜ್ಯ ಸರಕಾರ ಜಗಜ್ಜಾಹೀರು ಮಾಡಿದೆ. ಇದದರಿಂದ ಸಂಘರ್ಷದ ವಾತಾವರಣ ನಿರ್ಮಾಣ ಆಗುವ ಆತಂಕ ಎದುರಾಗಿದ್ದು ಈ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಸರ್ಕಾರ ರಾಜಧರ್ಮವನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು.
ಈ ಮಸೂದೆಗಳು ಸಚಿವ ಸಂಪುಟದಲ್ಲಿ ಅಂಗೀಕಾರವಾದರೂ ಹಿಂದುತ್ವದ ಮತ್ತು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಮೌನ ವಹಿಸಿರುವುದು ವಿಷಾದನೀಯವಾಗಿದೆ ಎಂದು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.























