ಪುತ್ತೂರು: ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್‌ಸ್ಟೆಬಲ್ ಆಗಿ ಸ್ಕರಿಯ ಅವರು ಅಧಿಕಾರ ಸ್ವೀಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಸ್ಕರಿಯ ಅವರು, ಈ ಹಿಂದೆ 2005 ರಿಂದ 2011 ರ ವರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲೇ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಪುನಃ ಸುಳ್ಯ ಠಾಣೆಗೆ ಮರಳಿದ್ದಾರೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಠಾಣೆ, ಮಂಗಳೂರಿನ ಜಿಲ್ಲಾ ಅಪರಾಧ ವಿಭಾಗ (DCB) ಹಾಗೂ ಪುತ್ತೂರು ನಗರ ಠಾಣೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಇದೀಗ ಪುತ್ತೂರು ನಗರ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದಿದ್ದಾರೆ. ಸ್ಕರಿಯ ಅವರು ಕಡಬ ತಾಲೂಕಿನ ಬಲ್ಯ ಗ್ರಾಮದ ಮಾತ್ರಡಿ ಮನೆಯ ದಿ. ಎಂ.ಜಿ. ಅಬ್ರಹಾಂ ಹಾಗೂ ದಿ. ಸಾರಮ್ಮ ಅಬ್ರಹಾಂ ದಂಪತಿಯ ಪುತ್ರ.

























