ಕರ್ನಾಟಕ ಹಾಲು ಮಹಾಮಂಡಳಿಗೆ ಹಾಲು, ಮೊಸರು, ಮಜ್ಜಿಗೆ ಪೂರೈಸುವ ಸವಾಲು ಎದುರಾಗಿದೆ. ಕೆಎಂಎಫ್ ಅಡಿಯಲ್ಲಿ ಬರುವ ರಾಜ್ಯದ 15 ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲು ಬೇಡಿಕೆ ಸರಿದೂಗಿಸುತ್ತಿಲ್ಲ.
ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ 8.30 ರ ವೇಳೆಗೆ ಅಂಗಡಿ, ನಂದಿನಿ ಮಳಿಗೆಗಳಲ್ಲಿ ಹಾಲು , ಮೊಸರು, ಮಜ್ಜಿಗೆ ಖಾಲಿಯಾಗಿರುತ್ತದೆ. ಮಧ್ಯಾಹ್ನದ ವೇಳೆಗೆ ಪೂರೈಕೆ ಆಗುವ ಪ್ಯಾಕೆಟ್‌ಗಳು ಸಂಜೆ ವೇಳೆಗೆ ಖಾಲಿ ಖಾಲಿ! ರಾತ್ರಿ 8-9 ಗಂಟೆಗೆ ಹಾಲು ಸಿಕ್ಕರೆ ಪುಣ್ಯವೇ ಸರಿ. ಹೀಗಾಗಿ ಜನ ಹಾಲು-ಮೊಸರಿಗೆ ಅಂಗಡಿ ಅಂಗಡಿಗೆ ಅಲೆಯಬೇಕು, ನಗರ-ಪಟ್ಟಣ ಸುತ್ತಬೇಕಿದೆ.
ಕೆಎಂಎಧಿಫ್‌ನಲ್ಲಿ (ಎಲ್ಲಾಒಕ್ಕೂಟ ಸೇರಿಸಿ) ಪ್ರತಿ ನಿತ್ಯ ಸರಾಸರಿ 82 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸರಾಸರಿ 52 ಲಕ್ಷ ಲೀಟರ್‌ನಷ್ಟು ಹಾಲಿನ ಪ್ಯಾಕೆಟ್‌ಗಳು ಮಾರಾಟವಾಗುತ್ತಿವೆ. 12.50 ಲಕ್ಷ ಲೀಟರ್ ಮೊಸರಿನ ಪ್ಯಾಕೆಟ್‌ಗಳು, 1.50 ಲಕ್ಷ ಲೀಟರ್ ಮಜ್ಜಿಗೆಗೆ ಪ್ಯಾಕೆಟ್‌ಗಳು ಮಾರಾಟವಾಗುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಈ ಮೊತ್ತ ಯಾವುದಕ್ಕೂ ಸಾಕಾಗುತ್ತಿಲ್ಲ.
ಪ್ರತಿನಿತ್ಯ 52 ಲಕ್ಷ ಲೀಟರ್ ಸರಾಸರಿ ನಂದಿನಿ ಹಾಲಿನ ಪ್ಯಾಕೆಟ್‌ಗಳು ಮಾರಾಟವಾಗುತ್ತಿವೆ. ಇತಿಹಾಸದಲ್ಲಿ ಇಷ್ಟು ಲೀಟರ್ ಮಾರಾಟವಾಗಿರಲಿಲ್ಲ. ಗರಿಷ್ಠ 40-45 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿತ್ತು! 52 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದರೂ ಮಾರುಕಟ್ಟೆ ಬೇಡಿಕೆ ಹೆಚ್ಚುತ್ತಲೇ ಇದೆ. ಬಾಯಾರಿಕೆ ನೀಗಿಸಿಕೊಳ್ಳಲು ಜನ ಹಾಲನ್ನು ಕುಡಿಯಲು, ತಂಪುಪಾನೀಯ ಗೆ ಹೆಚ್ಚು ಬಳಕೆ ಮಾಡುತ್ತಿದ್ದಾರೆ.
75 ಲಕ್ಷ ಲೀಟರ್ : ರಾಜ್ಯದಲ್ಲಿಈ ಹಿಂದಿನ ವರ್ಷ ಸಂಗ್ರಹವಾಗುತ್ತಿದ್ದ ಹಾಲಿನ ಸರಾಸರಿ
82 ಲಕ್ಷ ಲೀಟರ್ : ಪ್ರಸ್ತುತ ಹಾಲು ಸಂಗ್ರಹ ಸರಾಸರಿ
40-45 ಲಕ್ಷ ಲೀಟರ್ : ನಿತ್ಯ ಮಾರಾಟವಾಗುತ್ತಿರುವ ಕೆಎಂಎಫ್ (ನಂದಿನಿ) ಹಾಲಿನ ಪ್ಯಾಕೆಟ್‌ಗಳು
12.50 ಲಕ್ಷ ಲೀಟರ್ : ಮೊಸರಿಗೆ ಬಳಕೆಯಾಗುತ್ತಿರುವ ಹಾಲು
1.50 ಲಕ್ಷ ಲೀಟರ್ : ನಂದಿನಿ ಮಜ್ಜಿಗೆಗೆ ಬಳಕೆಯಾಗುತ್ತಿರುವ ಹಾಲು
ಕೆಎಂಎಫ್‌ಗೆ ಹಾಲು ಪೂರೈಕೆ ಸವಾಲಾದರೆ, ಅಂಗಡಿಗಳಲ್ಲಿಹಾಲು ಉಳಿಸಿಕೊಳ್ಳುವ ಸವಾಲು! ಬಿಸಿಲಿನ ತೀವ್ರತೆಯಿಂದ ಹಾಲು ಬೇಗ ಕೆಡುವುದರಿಂದ ಎಷ್ಟೋ ಅಂಗಡಿಯವರು ಕಡಿಮೆಯಾದರೂ ಪರವಾಗಿಲ್ಲ ನಷ್ಟ ಬೇಡವೆಂದು ಬೆಳಗ್ಗೆ, ಮಧ್ಯಾಹ್ನ ಕಡಿಮೆ ಲೆಕ್ಕಾಚಾರದಲ್ಲಿ ಹಾಲು ಹಾಕಿಸಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಹಾಲು-ಮೊಸರು- ಮಜ್ಜಿಗೆಗೆ ಬೇಡಿಕೆ ಹೆಚ್ಚಿದೆ. ಒಕ್ಕೂಟಗಳಲ್ಲಿ ಹಾಲು ಸಂಗ್ರಹ ಹೆಚ್ಚುತ್ತಿದ್ದರೂ ಮಾರುಕಟ್ಟೆ ಬೇಡಿಕೆ ಕೂಡ ಏರುಗತಿಯಲ್ಲೇ ಇದೆ. ನಿತ್ಯ ಸರಾಸರಿ 82 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದರೂ ನಮಗೆ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಹಾಲು, ಮೊಸರು, ಮಜ್ಜಿಗೆ ಪೂರೈಕೆ ಸವಾಲಿದೆ. ಗುಣಮಟ್ಟ ಕಾಯ್ದುಕೊಂಡು ಪೂರೈಕೆ ಮಾಡಲಾಗುತ್ತಿದೆ, ಬೇಡಿಕೆಗೆ ಸರಿದೂಗಿಸುವ ಪ್ರಯತ್ನ ನಡೆಯುತ್ತಲೇ ಇದೆ.