ಪುತ್ತೂರು – ಬೆಟ್ಟಂಪಾಡಿ, ಕುದುರಡ್ಕ ಶ್ರೀ ವಿಷ್ಣು ವಾಲಿಬಾಲ್ ಇದರ ವಾರ್ಷಿಕ ಲೀಗ್ ಮಾದರಿಯ ವಾಲಿಬಾಲ್ ಅಕ್ಟೋಬರ್ 18 ರಂದು ಅದ್ದೂರಿಯಾಗಿ ನೆರವೇರಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ತಂಡದ ಒಬ್ಬ ಸದಸ್ಯರು ಅಕಾಲಿಕ ಮರಣ ಹೊಂದಿದ್ದು ಇವರ ನೆನಪಿಗಾಗಿ ತಂಡವು ಈ ವರ್ಷದಿಂದ ಪ್ರತಿ ವರ್ಷ ಪಂದ್ಯಾಟವನ್ನು ಹಮ್ಮಿ ಕೊಂಡಿದ್ದು. ದಿನಾಂಕ 27 ಆದಿತ್ಯವಾರದಂದು ಕುಡುರಡ್ಕ ಕಾರಣಿಕ ಶಕ್ತಿಗಳ ಸಾನಿಧ್ಯದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಲಾಯಿತು. ಈ ಸಂಧರ್ಭದಲ್ಲಿ ತಂಡದ ಎಲ್ಲಾ ಸದಸ್ಯರು, ಊರಿನ ಪ್ರಮುಖರು ಪಾಲ್ಗೊಂಡಿದ್ದರು. ಲೀಗ್ ಮಾದರಿಯ ಪಂದ್ಯಾಟ ಇದಾಗಿದ್ದು. ಎಲ್ಲರನ್ನು ಪಂದ್ಯಾಕೂಟಕ್ಕೆ ಆಮಂತ್ರಿಸಲಾಗಿದೆ.



























