ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ಕೊನೆಗೂ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
ಅ. ಕ್ರ : 110/16, ಕಲಂ : 457,380 IPC
ಅ. ಕ್ರ : 112/16, ಕಲಂ : 457,380 IPC
ಅ. ಕ್ರ : 113/16, ಕಲಂ :457,380 IPC
ಅ. ಕ್ರ : 114/16, ಕಲಂ : 457,380 IPC
ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ದೊಡ್ಡಬಳ್ಳಾಪುರ ನಿವಾಸಿ ನರಸಿಂಹ @ರಾಜು, ಮಹಾರಾಷ್ಟ್ರ ನಿವಾಸಿ ವಿಜಯ್ ಸುರೇಶ ಪೊಂಕೆ, ಮಹಾರಾಷ್ಟ್ರ ನಿವಾಸಿ ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡ ನಿವಾಸಿ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯ ನಿವಾಸಿ ಪ್ರಕಾಶ್ ಬಹದ್ದೂರ್ ಎಂಬವರುಗಳಿಗೆ ಈಗಾಗಲೇ ಮಾನ್ಯ ACJ ಮತ್ತು JMFC ನ್ಯಾಯಾಲಯ -ಪುತ್ತೂರು ಇಲ್ಲಿ 2 ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಗಿದ್ದು, ಸದ್ರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಮಹಾರಾಷ್ಟ್ರ ನಿವಾಸಿ ವಿಶಾಲ್ ಪೊಂಕೆ (30) ಎಂಬಾತನು ಕಳೆದ 5 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುತ್ತಾನೆ. ಈತನ ಪತ್ತೆಗಾಗಿ ಯತ್ನಿಸಿ ಆರೋಪಿ ವಿರುದ್ಧ PROCLAMATION ಹೊರಡಿಸಲಾಗಿರುತ್ತದೆ. ಸದ್ರಿ ಆರೋಪಿತನು ದಿನಾಂಕ 30.10.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿದ್ದು, ಮಾನ್ಯ 2ನೇ ACJ ಮತ್ತು JMFC ನ್ಯಾಯಾಲಯ -ಪುತ್ತೂರು ( ಸಂಚಾರಿ ನ್ಯಾಯಾಲಯ -ಕಡಬ ) ನ್ಯಾಯಾಲಯವು ಆರೋಪಿಗೆ ನ್ಯಾಯಾoಗ ಬಂದನಕ್ಕೆ ಒಪ್ಪಿಸಿರುತ್ತದೆ.
ಸದ್ರಿ ವಿಶಾಲ್ ಪೊಂಕೆ (30) ವಿರುದ್ದ ಕಡಬ ಠಾಣೆಯಲ್ಲಿ MOB ತೆರೆಯಲಾಗಿದ್ದು, ಈತನ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ. ಕ್ರ : 105/2016, ಕಲಂ : 457,380 IPC ಪ್ರಕರಣವೂ ದಾಖಲಾಗಿದೆ.




















